'ಹಾಸ್ಯ ಕಾರಂಜಿ' ಕಾರ್ತಿಕ್ ರಾವ್ ಪಾಂಡೇಶ್ವರ

Upayuktha
0

ಮೇಶ್ ರಾವ್ ಹಾಗೂ ಪುಷ್ಪ ರಾವ್ ಮಗನಾಗಿ 18.04.1993 ರಂದು ಕಾರ್ತಿಕ್ ರಾವ್ ಪಾಂಡೇಶ್ವರ ಜನನ. ಐಟಿಐ ಇವರ ವಿದ್ಯಾಭ್ಯಾಸ. ಯಕ್ಷಗಾನ ಕಲೆಯ ಮೇಲೆ ಇದ್ದ ಆಸಕ್ತಿ ಇವರು ಯಕ್ಷಗಾನ ರಂಗ ಬರಲು ಪ್ರೇರಣೆ. ರಂಗಕ್ಕೆ ಹೋಗುವ ಮೊದಲು ಹಿರಿಯ ಕಲಾವಿದರ ಹತ್ತಿರ ಮಾರ್ಗದರ್ಶನ ಪಡೆದು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಪಾಂಡೇಶ್ವರ ಅವರು ಹೇಳುತ್ತಾರೆ.

ಎಲ್ಲ ಪೌರಾಣಿಕ ಪ್ರಸಂಗಗಳು ಹಾಗೂ ಮೌಲ್ಯಾಧಾರಿತ ಹೊಸ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಎಲ್ಲಾ ವೇಷಗಳು ಇವರ ನೆಚ್ಚಿನ ವೇಷಗಳು. ಓದುವುದು, ಚೆಸ್, ಸ್ವಿಮ್ಮಿಂಗ್ ಇವರ ಹವ್ಯಾಸಗಳು. ಮಡಾಮಕ್ಕಿ ಮೇಳದಲ್ಲಿ 2 ವರ್ಷ ತಿರುಗಾಟ ಮಾಡಿ ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಹೀಗೆ ಹೇಳುತ್ತಾರೆ:-

ಬಹುತೇಕ ಪ್ರೇಕ್ಷಕರು ಇಡೀ ರಾತ್ರಿ ಆಟ ನೋಡುವ ಮನಸ್ಥಿತಿ ಇಲ್ಲದಿರುವುದರಿಂದ ಸಮಯ ಮಿತಿ ಪ್ರದರ್ಶನಗಳು ನಡೆಯುತ್ತಿದೆ ಹಾಗೂ ಇತ್ತೀಚೆಗೆ ಮಕ್ಕಳು, ಯುವ ಪ್ರೇಕ್ಷಕರು ಯಕ್ಷಗಾನದ ಕಡೆಗೆ ವಾಲುತ್ತಿರುವುದು ಯಕ್ಷಗಾನಕ್ಕೆ ಪೂರಕ ಬೆಳವಣಿಗೆ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಹೀಗೆ ಹೇಳುತ್ತಾರೆ:-

ಕೆಲವರು ಯಕ್ಷಗಾನ ಕಲೆಯ ಪ್ರೇಕ್ಷಕರು ಆಗಿದ್ದು, ಕೆಲವರು ನಿರ್ದಿಷ್ಟ ಕಲಾವಿದನ ಅಭಿಮಾನಿಗಳಾಗಿ ವ್ಯಕ್ತಿನಿಷ್ಠ ಅಭಿಮಾನಿಗಳಾಗುತ್ತಾರೆ. ಇದು ಯಕ್ಷಗಾನಕ್ಕೆ ಮಾರಕ. ಹಾಗಾಗಿ ಒಬ್ಬ ಕಲಾವಿದನ ಅಭಿಮಾನಿ ಆಗದೆ ಯಕ್ಷಗಾನದ ಅಭಿಮಾನಿಯಾಗಿ ವಸ್ತುನಿಷ್ಠ ಅಭಿಮಾನ ತೋರುವುದು ಯಕ್ಷಗಾನಕ್ಕೆ ಪೂರಕ ಅನ್ನುವುದು ಇವರ ಅಭಿಪ್ರಾಯ.


ಕಾರ್ತಿಕ್ ರಾವ್ ಪಾಂಡೇಶ್ವರ ಅವರು ಧನ್ಯ ರಾವ್ ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top