ಮುಡಿಪು: ಉಳ್ಳಾಲ ತಾಲೂಕಿನ ಮುಡಿಪು ಶ್ರೀ ಭಾರತಿ ಶಾಲೆ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಶಾಲೆಯ ಅಮೃತ ಮಹೋತ್ಸವದ ನೂತನ ಲಾಂಛನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಅನಾವರಣಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭ ಶಾಲೆಯ ಅಮೃತ ಮಹೋತ್ಸವ ಸಮಿತಿ ವತಿಯಿಂದ ಶಾಲೆಯ ನವೀಕರಣ ಹಾಗೂ ಅಭಿವೃದ್ಧಿ ಕಾರ್ಯಚಟುವಟಿಕೆಗಳ ವಿವರಗಳನ್ನು ಡಾ. ಹೆಗ್ಗಡೆ ಅವರಿಗೆ ಸಲ್ಲಿಸಿ ಮಾಹಿತಿ ನೀಡಲಾಯಿತು.
ಲಾಂಛನ ಅನಾವರಣ ಸಂದರ್ಭ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್., ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಮೊಹಮ್ಮದ್ ಅಸ್ಗರ್, ಶ್ರೀ ಭಾರತಿ ಶಾಲೆಯ ಸಂಚಾಲಕ ಕೆ. ಸುಬ್ರಹ್ಮಣ್ಯ ಭಟ್, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಪ್ರಮುಖರಾದ ಜಗದೀಶ ಅಡಪ, ಕವಿ ನೇಮು ಪೂಜಾರಿ ಇರಾ, ಆರ್ಕಿಟೆಕ್ಟ್ ನಾರಾಯಣಯ್ಯ ಮೂಳೂರು, ವೈದ್ಯ ಡಾ. ಅರುಣ್ ಪ್ರಸಾದ್ ಮತ್ತಿತರರು ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


