ಬರ್ಗರ್ ಬೇಕರ್ ಕೋಟಿಂಗ್ಸ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ಭಾರಿ ಅಗ್ನಿ ಅವಘಡ

Upayuktha
0

ಪಣಜಿ: ಪಿಲರ್ನಾದ ಗೋವಾ ಇಂಡಸ್ಟ್ರಿಯಲ್ ಎಸ್ಟೇಟ್‍ನಲ್ಲಿರುವ ಬರ್ಗರ್ ಬೇಕರ್ ಕೋಟಿಂಗ್ಸ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಈ ಅಪಘಾತದಲ್ಲಿ ಕಂಪನಿಯ ಗೋಡೌನ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಕಂಪನಿ ತಿಳಿಸಿದೆ.


ಮಂಗಳವಾರ ಸಂಜೆ ನಡೆದ ಈ ಘಟನೆಯಿಂದಾಗಿ ಸ್ಥಳೀಯ ಪರಿಸರದಲ್ಲಿ ಆತಂಕ ಮನೆಮಾಡಿತ್ತು. ತಡರಾತ್ರಿಯ ವೇಳೆಗೆ ಅಗ್ನಿಶಾಮಕ ದಳದವರು ಬೆಂಕಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಬೆಂಕಿ ನಂದಿಸಲು ರಾಜ್ಯದ ವಿವಿದೆಡೆಯಿಂದ 40 ಅಗ್ನಿಶಾಮಕ ದಳದ ತಂಡಗಳು ಆಗಮಿಸಿದ್ದರು. ಇದಲ್ಲದೆ ಸೇನೆ ಮತ್ತು ನೌಕಾಪಡೆಯ ಸಹಾಯವನ್ನೂ ಪಡೆಯಲಾಗಿತ್ತು. ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಕೆಲ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.


ಸಿಕ್ಕಿರುವ ಮಾಹಿತಿ ಪ್ರಕಾರ ಮಂಗಳವಾರ ಸಂಜೆ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿಯಿಂದಾಗಿ, ದೊಡ್ಡ ಪ್ರಮಾಣದ ಕಪ್ಪು ಹೊಗೆ ನಿರಂತರವಾಗಿ ಆಕಾಶಕ್ಕೆ ಏರುತ್ತಿದೆ. ಘಟನೆ ನಡೆದ ಸ್ಥಳದಿಂದ ಹತ್ತರಿಂದ ಹನ್ನೆರಡು ಕಿಲೋಮೀಟರ್‍ವರೆಗೆ ಕಪ್ಪು ಹೊಗೆ ಹರಡಿತ್ತು. ಈ ಹೊಗೆಯು ಸಮೀಪದ ಸಲ್ಗಾಂವ್, ಪರ್ವರಿ, ಕಾಂದೋಳಿ, ಹಾಗೂ ಪಣಜಿ ಮತ್ತು ತಾಲಿಗಾಂವ ಪ್ರದೇಶದ ವರೆಗೂ ಹರಡಿತ್ತು.


ಬೆಂಕಿ ಹೊತ್ತಿಕೊಂಡಿರುವುದು ಗಮನಕ್ಕೆ ಬಂದಾಗ ಕಂಪನಿಯ ಗೋದಾಮಿನಲ್ಲಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಒಟ್ಟು 94 ಕಾರ್ಮಿಕರು ಕೆಲಸದಲ್ಲಿದ್ದರು.ಬೆಂಕಿ ನಂದಿಸಲು ಪ್ರಯತ್ನಿಸಲಾಯಿತು. ಆದರೆ, ಬೆಂಕಿ ನಿಯಂತ್ರಣ ತಪ್ಪಿದ ನಂತರ ಕಂಪನಿಯಲ್ಲಿದ್ದ ಫೈರ್ ಅಲಾರ್ಮ್ ಎಲ್ಲರಿಗೂ ಎಚ್ಚರಿಕೆ ನೀಡಿತು. ನಂತರ ಎಲ್ಲರನ್ನು ಗೋದಾಮಿನಿಂದ ಹೊರಕ್ಕೆ ಕರೆತರಲಾಯಿತು. ಅದೃಷ್ಟವಶಾತ್, ಯಾವುದೇ ಸಿಬ್ಬಂದಿ ಗಾಯಗೊಂಡಿಲ್ಲ ಅಥವಾ ಸಾವನ್ನಪ್ಪಿಲ್ಲ. ಸುಮಾರು 40 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿದ್ದವು. ಈ ವೇಳೆ ಕೈಗಾರಿಕಾ ವಸಾಹತು ನೀರು ಕೂಡ ಬಳಕೆಯಾಗುತ್ತಿತ್ತು. ಅದೇ ರೀತಿ 25 ಖಾಸಗಿ ನೀರಿನ ಟ್ಯಾಂಕರ್‍ಗಳ ಮೂಲಕವೂ ಅಗ್ನಿಶಾಮಕ ವಾಹನಗಳು ಹಾಗೂ ಈ ಟ್ಯಾಂಕರ್‍ಗಳ ನೀರನ್ನು ತರಲಾಯಿತು. ಬೆಂಕಿ ತಗುಲಿದ ಗೋದಾಮಿನಲ್ಲಿ ಹೆಚ್ಚಿನ ಪ್ರಮಾಣದ ಫಿನಿಶಿಂಗ್ ಸಾಮಗ್ರಿಗಳು (ಬಣ್ಣದ ಡಬ್ಬಗಳು) ಹಾಗೂ ಇತರೆ ಸಾಮಗ್ರಿಗಳಿದ್ದವು. ಇವುಗಳಲ್ಲಿ ಕೆಲವು ಪಾತ್ರೆಗಳು ಮತ್ತು ಬ್ಯಾರೆಲ್‍ಗಳು ಬೆಂಕಿಯಿಂದಾಗಿ ಮಧ್ಯದಲ್ಲಿ ಸ್ಫೋಟಗೊಳ್ಳುತ್ತಿತ್ತು. ಹಾಗಾಗಿ ಬೆಂಕಿ ಉರಿಯುತ್ತಲೇ ಇತ್ತು. ಈ ಕಂಪನಿಯಲ್ಲಿ ವಿವಿಧ ಬಣ್ಣಗಳನ್ನು ತಯಾರಿಸಲಾಗುತ್ತದೆ. ಈ ಬಣ್ಣಗಳಲ್ಲಿ ವಿವಿಧ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರಿಂದ ತಡರಾತ್ರಿವರೆಗೂ ಬೆಂಕಿ ಹೊತ್ತಿ ಉರಿಯುತ್ತಲೇ ಇತ್ತು.


ಈ ಪ್ರದೇಶದಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕ ದಳದ ಕಾರ್ಯಾಚರಣೆಯ ನಂತರ ತಡರಾತ್ರಿ ಮೇಲೆ ಬೆಂಕಿ ಹತೋಟಿಗೆ ಬಂದಿದೆ ಎನ್ನಲಾಗಿದೆ. ಆದಾಗ್ಯೂ, ಇತರ ಸ್ಥಳಗಳಲ್ಲಿ ಬೆಂಕಿ ಕೆರಳುತ್ತಲೇ ಇತ್ತು. ಈ ಅಪಘಾತದ ನಂತರ, ಕಂಪನಿಯಿಂದ ಇನ್ನೂರು ಮೀಟರ್ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಅದೇ ರೀತಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಆಕ್ಸಿಜನ್ ಸೇರಿದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಇದಲ್ಲದೆ, ಸ್ಥಳೀಯ ಜನರಿಗೆ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top