ಹುತಾತ್ಮರ ಬಲಿದಾನ ವ್ಯರ್ಥವಾಗದಿರಲಿ: ಡಾ. ಚೂಂತಾರು

Chandrashekhara Kulamarva
0

 


ಮಂಗಳೂರು:  ದ.ಕ ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೇರಿಹಿಲ್‍ನಲ್ಲಿ ಸೋಮವಾರ ಹುತಾತ್ಮರ  ದಿನಾಚರಣೆ ಆಚರಿಸಲಾಯಿತು. ಬೆಳಗ್ಗೆ 11.00 ಗಂಟೆಗೆ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ 2 ನಿಮಿಷ ಮೌನಾಚರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಮಾದೇಷ್ಠರಾದ ಡಾ. ಮುರಲೀ ಮೋಹನ ಚೂಂತಾರು  ಇವರು, ಗಾಂಧೀಜಿಯವರ ತತ್ವ ಆದರ್ಶಗಳನ್ನು  ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಪ್ರತಿಯೊಬ್ಬರ ಮನದೊಳಗೆ ಗಾಂಧೀಜಿಯವರ ಆದರ್ಶಗಳು ಸುಪ್ತವಾಗಿದೆ. ಈ ಸುಪ್ತವಾಗಿರುವ ಆದರ್ಶಗಳನ್ನು ಎಚ್ಚರಿಸಿ ನಮ್ಮೊಳಗಿನ ಗಾಂಧೀಜಿಯವರನ್ನು ಬಡಿದೆಬ್ಬಿಸುವ ಕಾರ್ಯ ತುರ್ತಾಗಿ ಆಗಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ದೇಶಕ್ಕಾಗಿ ಬಲಿದಾನಗೈದ ಲಾಲಾ ಲಜಪತರಾವ್, ಚಂದ್ರಶೇಖರ ಆಜಾದ್, ಭಗತ್‍ಸಿಂಗ್, ಝಾನ್ಸಿರಾಣಿ ಲಕ್ಷ್ಮೀಬಾಯಿ ಮುಂತಾದವರನ್ನು ಸ್ಮರಿಸಿ ಅವರ ಬಲಿದಾನ ನಮ್ಮ ಯುವ ಜನರಿಗೆ ಸ್ಪೂರ್ತಿಯಾಗಲಿ ಎಂದು ಅವರು ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ. ಎಸ್, ದಲಾಯತ್ ಶ್ರೀಮತಿ ಮೀನಾಕ್ಷಿ ಹಾಗೂ ಮಂಗಳೂರು ಘಟಕದ ಗೃಹರಕ್ಷಕರಾದ ದಿವಾಕರ್, ಬಸವರಾಜ್, ಮಹಾದೇವ, ಸುಕನ್ಯಾ, ನಂದಿನಿ, ಸುಲೋಚನಾ, ಜಯಲಕ್ಷ್ಮೀ ಹಾಗೂ ಉಳ್ಳಾಲ ಘಟಕದ ಗೃಹರಕ್ಷಕ ಸುನಿಲ್ ಮುಂತಾದವರು  ಉಪಸ್ಥಿತರಿದ್ದರು.  


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
To Top