ಮಂಗಳೂರು: ದೇರಳಕಟ್ಟೆ ಶ್ರೀ ವೈದ್ಯನಾಥೇಶ್ವರ ಭಜನಾಮಂದಿರದ 15ನೇ ವಾರ್ಷಿಕ ಮಹೋತ್ಸವ ಸಲುವಾಗಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಬಗಂಬಿಲ ವೈದ್ಯನಾಥ ನಗರದಲ್ಲಿ ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ಕರ್ನಾಟಕ ಯಕ್ಷ ಭಾರತಿ ಪುತ್ತೂರು ವತಿಯಿಂದ ಪೂಜಾ ಸಹಿತ 'ಶ್ರೀ ಶನೈಶ್ಚರ ಮಹಾತ್ಮೆ' (ವಿಕ್ರಮಾದಿತ್ಯ ವಿಜಯ) ತುಳು ಯಕ್ಷಗಾನ ತಾಳಮದ್ದಳೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ವಿಕ್ರಮಾದಿತ್ಯ), ಅಶೋಕ ಶೆಟ್ಟಿ ಸರಪಾಡಿ (ಚಂದ್ರಶಯನ ), ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು (ಅಲೋಲಿಕೆ), ಪುತ್ತೂರು ದೇವರಾಜ ಹೆಗ್ಡೆ (ಶನೈಶ್ಚರ), ರವಿ ಅಲೆವೂರಾಯ ವರ್ಕಾಡಿ (ಸುಶೀಲೆ - ಪದ್ಮಾವತಿ), ಡಾ. ದಿನಕರ ಎಸ್. ಪಚ್ಚನಾಡಿ (ಆಸ್ಥಾನ ಪಂಡಿತ) ಮತ್ತು ಸುರೇಶ್ ಕೊಲೆಕಾಡಿ (ನಂದಿ ಶ್ರೇಷ್ಠಿ - ರಾಮಣ್ಣ ಗಾಣಿಗ) ಅರ್ಥಧಾರಿಗಳಾಗಿ ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ಹರೀಶ್ ಶೆಟ್ಟಿ ಸೂಡ (ಭಾಗವತರು), ಕೌಶಲ್ ರಾವ್ ಪುತ್ತಿಗೆ (ಮೃದಂಗ), ಸ್ಕಂದ ಕೊನ್ನಾರ್ (ಚಂಡೆ) ಮತ್ತು ಶರಣ್ ಶೆಟ್ಟಿ (ಚಕ್ರತಾಳ) ಸಹಕರಿಸಿದರು.
ಶ್ರೀ ವೈದ್ಯನಾಥ ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಅಂಚನ್ ವೈದ್ಯನಾಥನಗರ ಸ್ವಾಗತಿಸಿದರು. ಅರ್ಚಕರಾದ ವೆಂಕಟರಮಣ ಭಟ್ ಮತ್ತು ತಂಡದವರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ಪ್ರಮುಖರಾದ ಪುರುಷೋತ್ತಮ ಪೂಜಾರಿ, ಮೋನಪ್ಪ ಗಟ್ಟಿ, ಬಾಲಕೃಷ್ಣ ಶೆಟ್ಟಿ, ಪುಷ್ಪಲತಾ ಬಾಲಕೃಷ್ಣ ಶೆಟ್ಟಿ, ಶ್ವೇತಾ ವಿ., ಸುರೇಶ್ ಆಚಾರ್ಯ, ಶೇಖರ ಸಾಲ್ಯಾನ್, ಶ್ರವಣ್ ಕುಮಾರ್, ಕೃಷ್ಣ ನಾಯ್ಕ್, ಶಾಲಿನಿ ನಾಗರಾಜ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ