ಮಂಗಳ ಗಂಗೋತ್ರಿ: ಸಾರಾ ಅಬೂಬಕ್ಕರ್ ತಮ್ಮ ಕಾದಂಬರಿ, ಸಣ್ಣಕತೆಗಳ ಮೂಲಕ ಮುಸ್ಲಿಂ ಮಹಿಳೆಯರ ಸ್ವಾಭಿಮಾನದ ದನಿಯಾದವರು. ತಮ್ಮ ಚಿಂತನೆಗಳ ಮೂಲಕ ಕನ್ನಡದ ವೈಚಾರಿಕ ಪ್ರಜ್ಞೆಯ ಪ್ರತಿನಿಧಿಯಾಗಿದ್ದರು ಎಂದು ಮಂಗಳೂರು ವಿವಿಯ ಕನ್ನಡ ವಿಭಾಗದ ಅಧ್ಯಕ್ಷ ಪ್ರೊ. ಸೋಮಣ್ಣ ಹೇಳಿದರು.
ಅವರು ಬುಧವಾರ ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಸಾರಾ ಅಬೂಬಕ್ಕರ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ಮುಸ್ಲಿಂ ಧಾರ್ಮಿಕ ಆಶಯಗಳನ್ನು ಒಪ್ಪಿಕೊಳ್ಳುತ್ತಲೇ ಅದರೊಳಗಿನ ಜೀವ ವಿರೋಧಿ, ಸ್ತ್ರೀ ವಿರೋಧಿ ಸಂಪ್ರದಾಯಗಳನ್ನು ವಿರೋಧಿಸಿದ ಸಾರಾ ಅವರು ಮಾನವೀಯ ಚಿಂತನೆಗಳನ್ನು ಹೊಂದಿದ್ದರು. ಎಲ್ಲ ಧರ್ಮಗಳೂ ಒಳವಿಮರ್ಶೆಗೆ ಅವಕಾಶ ಕಲ್ಪಿಸಿ ಮಾನವೀಯಗೊಳ್ಳಬೇಕಾದ ಅಗತ್ಯವನ್ನು ಸಾರಿದವರು ಎಂದರು. ತಲಾಕ್, ಒಜ್ಜತ್ ನಂತಹ ಸ್ತ್ರೀವಿರೋಧಿ ಆಚರಣೆಗಳನ್ನು ತನ್ನ ಸಾಹಿತ್ಯದ ಮೂಲಕ ಮೊದಲ ಬಾರಿಗೆ ಮುನ್ನೆಲೆಗೆ ತಂದು ಚರ್ಚಿಸಿ ಸಮಾಜದಲ್ಲಿ ಈ ಕುರಿತ ಸಂವಾದಗಳನ್ನು ರೂಪಿಸಿದ ಕೀರ್ತಿ ಸಾರಾ ಅವರಿಗೆ ಸಲ್ಲಬೇಕು ಎಂದು ಹೇಳಿದರು.
ಸಭೆಯಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಅಭಯ ಕುಮಾರ್, ಡಾ. ನಾಗಪ್ಪ ಗೌಡ, ಡಾ. ಯಶುಕುಮಾರ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು, ವಿವಿಧ ಪೀಠಗಳ ಸಿಬ್ಬಂದಿಗಳು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ