ಮಂಗಳೂರು ವಿವಿ- ‘ಕನಕ ಕೀರ್ತನ ಗಂಗೋತ್ರಿ’: ಗಾಯಕರಿಗೆ ಆಹ್ವಾನ

Upayuktha
0


ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ನಡೆಯುವ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮವು 14 ಫೆಬ್ರವರಿ 2023 ರಂದು ಮಂಗಳವಾರ ಪೂರ್ವಾಹ್ನ 10 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯಲಿರುವುದು.

ಕನಕ ಕೀರ್ತನ ಗಾಯನ ಕಾರ್ಯಕ್ರಮವು ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ, ಅಧ್ಯಾಪಕ-ಅಧ್ಯಾಪಕೇತರ ವಿಭಾಗಗಳಲ್ಲಿ ನಡೆಯಲಿದೆ.

ಸಾರ್ವಜನಿಕ ವಲಯಕ್ಕೆ ಕನಕದಾಸರ ಕೀರ್ತನೆಗಳ– `ಕನಕ ಸಮೂಹ ನೃತ್ಯ ಭಜನೆ’ ಎಂದು ಒಟ್ಟು ಆರು ವಿಭಾಗಗಳಾಗಿ ನಡೆಯಲಿದೆ. ಆಸಕ್ತರು ಫೆಬ್ರವರಿ-10ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ಕೋರಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಗುವುದು.

ಕೀರ್ತನ ಗಾಯನ ಕಾರ್ಯಕ್ರಮದ ಪ್ರತಿ ವಿಭಾಗದಲ್ಲಿ ಆಯ್ಕೆಯಾದ  ಮೂವರು ಅಭ್ಯರ್ಥಿಗಳಿಗೆ ತಲಾ   ರೂ. 2,000 ಮತ್ತು `ಕನಕ ಸಮೂಹ ನೃತ್ಯ ಭಜನೆ’ಯಲ್ಲಿ ಆಯ್ಕೆಯಾದ ಮೂರು ತಂಡಗಳಿಗೆ ತಲಾ  ರೂ. 4,000/- ನಗದು, ಕನಕ ಪುರಸ್ಕಾರ ಹಾಗು ಪ್ರಮಾಣ ಪತ್ರಗಳನ್ನು ಶೈಕ್ಷಣಿಕ ವರ್ಷದ ಕೊನೆಯಲ್ಲಿ ನಡೆಯುವ ‘ಕನಕ ಸ್ಮೃತಿ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು. Office Email Id : kanakadasaresearchcenter2008@gmail.com ಅಥವಾ WhatsAppNo: 9591480138 / 9632346126 ಈ ಸಂಖ್ಯೆಯ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಜನೆ ಕಾರ್ಯಕ್ರಮಗಳಲ್ಲಿ ಕನಕದಾಸರ ಕೀರ್ತನೆಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಸಾರ್ವಜನಿಕ ವಿಭಾಗದಲ್ಲಿ ಈ ವರ್ಷ ಕನಕದಾಸರ ಕೀರ್ತನೆಗಳ ಸಮೂಹ ನೃತ್ಯ ಭಜನಾ ತಂಡಗಳಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಭಾಗವಹಿಸುವ ಪ್ರತಿ ತಂಡಕ್ಕೆ ಹತ್ತು ನಿಮಿಷಗಳ ಅವಕಾಶವಿರುತ್ತದೆ. 

ಆಯ್ಕೆಗೊಂಡ ಮೂರು ತಂಡಗಳಿಗೆ ತಲಾ 4000 ನಗದು, ಕನಕ ಪುರಸ್ಕಾರ ಮತ್ತು ಪ್ರಮಾಣಪತ್ರ ನೀಡಲಾಗುವುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top