ಸಹೋದರನ ಮೇಲೆ ಶಾಸಕ ಕುಮಾರ್ ಬಂಗಾರಪ್ಪ ವಾಗ್ದಾಳಿ

Upayuktha
0

6.6 ಕೋಟಿ ಚೆಕ್ ಬೌನ್ಸ್ ಕೇಸ್‌ನಲ್ಲಿ ಫೋರ್ಜರಿ ಮಾಡಿದ್ದಾರೆ: ಮಧು ವಿರುದ್ಧ ಗಂಭೀರ ಆರೋಪ


ಶಿವಮೊಗ್ಗ: ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಅಧ್ಯಕ್ಷರು ಇಬ್ಬರೂ ಬೇಲ್ ಮೇಲ್ ಇದ್ದಾರೆ ಎಂದು ಸೊರಬ ಶಾಸಕ ಕುಮಾರ್ ಬಂಗಾರಪ್ಪ ಸಹೋದರನ ಮೇಲೆ ವಾಗ್ದಾಳಿ ನಡೆಸಿದ್ದಾರೆ.


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 6.6 ಕೋಟಿ ಚೆಕ್ ಬೌನ್ಸ್ ಕೇಸ್‌ನಲ್ಲಿ ಫೋರ್ಜರಿ ಮಾಡಿ, ದಂಧೆ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿ ಇಡೀ ಕಾಂಗ್ರೆಸ್ ಪಕ್ಷದವರೇ ಬೇಲ್ ಮೇಲೆ ಇದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಶಿಕ್ಷಕರ ವರ್ಗಾವಣೆ ಬಗ್ಗೆ ಜ್ಞಾನ ಇಲ್ಲದೇ ಮಧುಬಂಗಾರಪ್ಪ ಮಾತನಾಡುತ್ತಿದ್ದಾರೆ. ಸಿಎಂ ಕೂಡ ಈ ವಿಚಾರದಲ್ಲಿ ಏನನ್ನು ಮಾಡಲು ಆಗುವುದಿಲ್ಲ. ಹಾಳೂರಿನಲ್ಲಿ ಉಳಿದವನೇ ಗೌಡ ಎನ್ನುವ ಹಾಗೆ ಅವನನ್ನು ಕಾಂಗ್ರೆಸ್ ನವರು ಕರೆತಂದಿದ್ದಾರೆ. ಬಿಜೆಪಿ ಪಾರ್ಟಿ ಸಿದ್ದಾಂತ ಗೊತ್ತಿಲ್ಲ ಎಂದು ನನಗೆ ಕಲಿಸಿಕೊಡಲು ಬರುತ್ತಿದ್ದಾರೆ. ಎಲ್ಲಾ ಪಾರ್ಟಿಗೂ ಓಡಾಡುತ್ತಿದ್ದಾರೆ. ಮಧು ಬಂಗಾರಪ್ಪ ಸೇರಲು ಆಪ್ ಪಾರ್ಟಿ ಒಂದು ಉಳಿದಿದೆ ಎಂದು ಸಹೋದರನ ಕಾಲೆಳೆದಿದ್ದಾರೆ.


ಚೆಕ್ ಬೌನ್ಸ್ ಕೇಸ್‌ನಿಂದ ತಪ್ಪಿಸಿಕೊಳ್ಳಲು ಕಡೆಯ ಪ್ರಯತ್ನ ಎಂದು ಈಗ ಕಾಂಗ್ರೆಸ್‌ಗೆ ಸೇರಿಕೊಂಡಿದ್ದಾರೆ. ಕಡೆ ಚುನಾವಣೆ ಎಂದು ಈಗ ಹೇಳುತ್ತಿದ್ದಾರೆ. ಇವರ ಸಾಹಸವನ್ನು ಜೆಡಿಎಸ್ ಪಕ್ಷದವರು ಹೇಳುತ್ತಾರೆ. ಮಧು ಬಂಗಾರಪ್ಪ ಸೊರಬ ಶಾಸಕ ಇದ್ದಾಗ ಒಂದೇ ಒಂದು ಅರ್ಜಿ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಅವತ್ತೇ ಎಂತಹ ಮಹಾನುಭಾವ ಎಂದು ಸರ್ಟಿಫಿಕೇಟ್ ಕೊಟ್ಟಿಹೋಗಿದ್ದಾರೆ ಎಂದು ಕುಟುಕಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top