ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ತ್ಯಾಗರಾಜ ಆರಾಧನೆ ಸಂಪನ್ನ

Upayuktha
0


ಕಾಸರಗೋಡು: ವಿದ್ಯಾನಗರ ಶ್ರೀ ಗೋಪಾಲಕೃಷ್ಣ ಸಂಗೀತ ಪಾಠಶಾಲೆಯ ನೇತೃತ್ವದಲ್ಲಿ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ತ್ಯಾಗರಾಜ ಆರಾಧನೆ ಸಂಪನ್ನವಾಯಿತು.


ಸಂಗೀತ ವಿದುಷಿಯರಾದ ಉಷಾ ಈಶ್ವರ ಭಟ್, ಜಯಲಕ್ಷ್ಮಿ ಎಸ್ . ಭಟ್ ಮತ್ತು ಪಾಠಶಾಲೆಯ ಶಿಷ್ಯರು ಕಾರ್ಯಕ್ರಮ ನಡೆಸಿಕೊಟ್ಟರು. ಆರಾಧನೆಯ ಅಂಗವಾದ ಸದ್ಗುರು ತ್ಯಾಗರಾಜ ಸ್ವಾಮಿಗಳ ಘನಪಂಚರತ್ನ ಕೀರ್ತನಾಲಾಪನೆ, ಆಂಜನೇಯ ಸ್ತುತಿ ಇವುಗಳನ್ನು ಪ್ರಸ್ತುತಪಡಿಸಲಾಯಿತು. ಪಕ್ಕವಾದ್ಯದಲ್ಲಿ ಪಿಟೀಲಿನಲ್ಲಿ ಪ್ರಭಾಕರ ಕುಂಜಾರು, ಮೃದಂಗದಲ್ಲಿ ವಿದ್ವಾನ್  ಶ್ರೀಧರ ಭಟ್ ಬಡಕ್ಕೇಕರೆ, ಘಟಂನಲ್ಲಿ ವಿದ್ವಾನ್ ಬಿ. ಜಿ. ಈಶ್ವರ ಭಟ್ ಸಹಕಾರ ನೀಡಿದರು.


ಹಾಡುಗಾರಿಕೆಯಲ್ಲಿ ಡಾ. ಮಾಯಾ ಮಲ್ಯ, ಪ್ರಕಾಶ ಆಚಾರ್ಯ ಕುಂಟಾರು, ಶ್ರದ್ಧಾ ನಾಯರ್ಪಳ್ಳ, ಡಾ ಜಯಶ್ರೀ ನಾಗರಾಜ್, ಡಾ ಉಮಾಮಹೇಶ್ವರಿ ಕಂಗಿಲ, ಪ್ರೀತಾ ಸಜಿತ್, ಲತಾ ರಾಜನ್, ಅರ್ಚನಾ ಶೆಣೈ, ಗೋಪೀ ಚಂದ್ರನ್, ವಿದ್ಯಾ ನಾಗರಾಜ್, ಪುಷ್ಪ, ಗಾಯತ್ರಿ ಹರಿಪ್ರಸಾದ್, ವಿಜಯ ಶೆಣೈ, ಸುರೇಖಾ ಜಯಕುಮಾರ್, ಉಷಾ ರವಿಶಂಕರ್, ಉದಯಕುಮಾರ್ ಯನ್ ಕೆ, ಕುಮಾರಿ ಸಮನ್ವಿತಾ ಗಣೇಶ್ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮುಳಿಯಾರು ಸ್ಕಂದ ನಿನಾದ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತಾರ್ಚನೆ ಜರಗಿತು.


ಗೋವಿಂದ ಬಳ್ಳಮೂಲೆ ಇವರು  ತ್ಯಾಗರಾಜ ಆರಾಧನೆಯ ಮಹತ್ವದ ಬಗ್ಗೆ ವಿವರಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಕ್ಷೇತ್ರದ ಅರ್ಚಕರಾದ ಅನಂತಪದ್ಮನಾಭ ಮಯ್ಯ ಇವರು ಸಮಾರಂಭ ಸಂಯೋಜನ ಮಾಡಿದರು. ರಾಘವನ್ ಬೆಳ್ಳಿಪ್ಪಾಡಿ ಸಾಂದರ್ಭಿಕ ಸಹಕಾರ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top