ಕಾಸರಗೋಡು : ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಾ ಇರುವ ಕಾಸರಗೋಡಿನ ಪೆರಿಯಾ ಆಲಕ್ಕೋಡಿನಲ್ಲಿರುವ ಗೋಕುಲಂ ಗೋಶಾಲೆಗೆ ಜಾರ್ಖಂಡ್ ನೀರಾವರಿ ಸಚಿವ ಮಿಥಿಲೇಶ್ ಕುಮಾರ್ ಠಾಕೂರ್ ಅವರು ತಮ್ಮ ಪತ್ನಿ ಚಂಚಲ್ ಠಾಕೂರ್ ಮತ್ತು ಮಕ್ಕಳಾದ ಪ್ರತ್ಯಕ್ಷ ಠಾಕೂರ್ ಮತ್ತು ಪ್ರತ್ಯಾಶಾ ಠಾಕೂರ್ ಅವರೊಂದಿಗೆ ಹೊಸ ವರ್ಷದ ದಿನದಂದು ಭೇಟಿ ನೀಡಿದರು.
ಹೊಸವರುಷದ ಅಂಗವಾಗಿ ಗೋವುಗಳಿಗೆ ಬೆಲ್ಲ ಮತ್ತು ಹಣ್ಣುಗಳನ್ನು ನೀಡಿ ಸಂಭ್ರಮಿಸಿದರು. ಡಾ. ನಾಗರತ್ನ ಹೆಬ್ಬಾರ್ ದೇಶಿ ಗೋವುಗಳ ಗುಣಗಳನ್ನು ವಿವರಿಸಿದರು. ಪಂಚಗವ್ಯ ಉತ್ಪನ್ನಗಳ ಬಗ್ಗೆ ತಿಳಿದುಕೊಂಡ ಅವರು ಉತ್ಪನ್ನಗಳನ್ನು ಖರೀದಿಸಿದರು. ಸಚಿವರು ಮಾತನಾಡುತ್ತಾ ಗೋಶಾಲೆಯಬಗ್ಗೆ ಖುಷಿಪಟ್ಟು ಇಲ್ಲಿ ನಡೆಯುವ ಸಂಗೀತೋತ್ಸವ ನೋಡಲು ಬರುತ್ತೇನೆ ಎಂಬುದಾಗಿ ನುಡಿದು ಹಿಂತಿರುಗಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ