ಮಂಗಳೂರು : ಮುಂಬರುವ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಪ್ರಾಕೃತಿಕ ದುರಂತಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಜನರನ್ನು ರಕ್ಷಿಸಲು ಮತ್ತು ಆಸ್ತಿಪಾಸ್ತಿ ರಕ್ಷಣೆಗೆ ಸಹಾಯ ಮಾಡುವ ಉದ್ದೇಶದಿಂದ ದ.ಕ. ಜಿಲ್ಲಾ ಗೃಹರಕ್ಷಕ ದಳಕ್ಕೆ ಗೃಹರಕ್ಷಕ ದಳ, ಕೇಂದ್ರ ಕಛೇರಿ ಇದರ ವತಿಯಿಂದ 2 ಗಾಳಿ ತುಂಬಿಸಿ ಓಡಿಸಬಹುದಾದ ಬೋಟು, 4 ಲೈಫ್‍ಬಾಯ್, 20 ಲೈಫ್‍ಜಾಕೆಟ್‍ಗಳು, 2-ಓಬಿಎಂ, 2-ಫ್ಲೋರ್ ಬೋರ್ಡ್, 4-ಫೂಟ್ ಪಂಪ್, 2-ಪೆಡಲ್ಸ್ , 2-ಇಲೆಕ್ಟ್ರಿಕ್ ಪಂಪ್, 2-ಸಿ ಆಂಚರ್, 2-ಪ್ರಥಮ ಚಿಕಿತ್ಸಾ ಪರಿಕರಗಳು, 4-ಡೆಟ್ಲೇಶನ್ ವೋಲ್ವ್ ಇತ್ಯಾದಿ ಪ್ರವಾಹರಕ್ಷಣಾ ಪರಿಕರಗಳನ್ನು ಮತ್ತು 2-ಕಂಪ್ಯೂಟರ್ ಹಾಗೂ 2-ಪ್ರಿಂಟರ್‍ಗಳನ್ನು ದಿನಾಂಕ: 24-01-2023 ರಂದು ಕೇಂದ್ರ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರು ಇದರ ಪ್ರಥಮ ದರ್ಜೆ ಸಹಾಯಕ ಶ್ರೀ ಅವಿನಾಶ್ ಇವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು, ಉಪ ಸಮಾದೇಷ್ಟರಾದ ಶ್ರೀ ರಮೇಶ್, ಕಛೇರಿ ಅಧೀಕ್ಷಕರಾದ ಶ್ರೀ ರತ್ನಾಕರ, ಗೃಹರಕ್ಷಕರಾದ ದಿವಾಕರ್, ನವೀನ್, ಫಯಾಜ್, ಸುರೇಶ್ ಉಮನಾಥ್ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ