ಮಕ್ಕಳ ಮಧುರ ಧ್ವನಿಯಲ್ಲಿ ಮೂಡಿಬಂದ ಭಕ್ತಿಭಾವದ ಗಾಯನ

Upayuktha
0

 


ಬೆಂಗಳೂರು : ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜನವರಿ 26, ಗುರುವಾರದಂದು ಏರ್ಪಡಿಸಿದ್ದ "ಪುರಂದರ ನಮನ" ವಿಶೇಷ ಗಾಯನ ಕಾರ್ಯಕ್ರಮವು ವಿ|| ಶ್ರೀಮತಿ ದಿವ್ಯಾ ಗಿರಿಧರ್ ಅವರ ನಿರ್ದೇಶನದಲ್ಲಿ ಗಾನಸುಧಾ ಮ್ಯೂಸಿಕಲ್ ಅಕಾಡೆಮಿಯ ವಿದ್ಯಾರ್ಥಿಗಳಾದ ಮನಸ್ವಿ ಕಶ್ಯಪ್, ದೀಪ್ತಿ ಶ್ರೀನಿವಾಸನ್, ಗೌರಿ, ಪ್ರಕೃತಿ, ಶ್ರೇಷ್ಟಾ, ಪವಿತ್ರಾ, ಪ್ರದ್ಯುಮ್ನ, ಮನು ಸರ್ವಜಿತ್, ಶ್ರೇಯಾ, ಹರ್ಷಿಣಿ, ಅನನ್ಯಾ, ಸಂಜನಾ ಮತ್ತು ಸಂಧ್ಯಾ ಇವರುಗಳ ಮಧುರ ಧ್ವನಿಯಲ್ಲಿ ಅಪರೋಕ್ಷ ಜ್ಞಾನಿಗಳಾದ ಹರಿದಾಸರುಗಳು ರಚಿಸಿದ ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿದರು. 


ವಾದ್ಯ ಸಹಕಾರದಲ್ಲಿ ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯), ಶ್ರೀ ರಂಗವಿಠಲ (ತಬಲಾ) ವಾದನದಲ್ಲಿ ಸಾಥ್ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top