
ಉಜಿರೆ: ಹಲ್ಲಂದೋಡಿ ಬಸದಿಯಲ್ಲಿ ಭಗವಾನ್ ಶ್ರೀ ವರ್ಧಮಾನ ಸ್ವಾಮಿ ಸನ್ನಿಧಿಯಲ್ಲಿ ಇದೇ 28 ರಂದು ಶನಿವಾರ ಮೂಡಬಿದ್ರೆ ಜೈನಮಠದ ಚಾರುಕೀರ್ತಿ ಭಟ್ಟಾರಕರ ದಿವ್ಯ ಉಪಸ್ಥಿತಿಯಲ್ಲಿ ವಾರ್ಷಿಕ ಪೂಜಾ ಮಹೋತ್ಸವ ನಡೆಯಲಿದೆ ಎಂದು ಬಸದಿಯ ಬಿ. ಶಶಿಕುಮಾರ ಇಂದ್ರರು ತಿಳಿಸಿದ್ದಾರೆ.
108 ಕಲಶ ಮಹಾಭಿಷೇಕ, ಮಹಾಪೂಜೆ, ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ಲಕ್ಷ ಹೂವಿನ ಪೂಜೆ ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ಮೂಡಬಿದ್ರೆಯ ಪೂಜ್ಯ ಚಾರುಕೀರ್ತಿ ಭಟ್ಟಾರಕರು ಮಂಗಲ ಪ್ರವಚನ ನೀಡುವರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ