ಅಂಬಿಕಾ ಮಹಾವಿದ್ಯಾಲಯದ ಬಿ.ಕಾಂ ವಿದ್ಯಾರ್ಥಿನಿ ಸ್ವರ್ಣಾ ಶೆಣೈ
ಪುತ್ತೂರು : ಭಾರತೀಯ ಲೆಕ್ಕ ಪರಿಶೋಧನಾ ಮಂಡಳಿಯು (ಐಸಿಎಐ) ಕಳೆದ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ನಡೆಸಿದ ಸಿ.ಎ. ಇಂಟರ್ ಗ್ರೂಪ್ ಪರೀಕ್ಷೆಯ ಗ್ರೂಪ್ 1 ವಿಭಾಗದ ಪರೀಕ್ಷೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಸ್ವರ್ಣಾ ಶೆಣೈ ಅವರು ರ್ತೇಡೆ ಹೊಂದಿದ್ದಾರೆ.
ತನ್ಮೂಲಕ ಮುಂದಿನ ಹಂತದ ಗ್ರೂಪ್ 2 ಪರೀಕ್ಷೆಗಳನ್ನು ಎದುರಿಸುವುದಕ್ಕೆ ಅರ್ಹರಾಗಿದ್ದಾರೆ. ಇವರು ಪುತ್ತೂರಿನ ನೆಲ್ಲಿಕಟ್ಟೆ ನಿವಾಸಿಗಳು ಹಾಗೂ ಶೆಣೈ ಬ್ರದರ್ಸ್ ಸಂಸ್ಥೆಯ ಮಾಲಕರಾದ ಜೀವನ್ ಶೆಣೈ ಹಾಗೂ ಜಯಶ್ರೀ ಶೆಣೈ ದಂಪತಿ ಪುತ್ರಿ. ವಿದ್ಯಾರ್ಥಿನಿಯ ಸಾಧನೆಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಅಭಿನಂದನೆ ಸಲ್ಲಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ