ಮಂಗಳೂರು ವಿಶ್ವವಿದ್ಯಾನಿಲಯದ ನಲ್ವತ್ತೊಂದನೆಯ ವಾರ್ಷಿಕ ಘಟಿಕೋತ್ಸವವನ್ನು 2023 ರ ಫೆಬ್ರವರಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಎಲ್ಲಾ ಸಂಯೋಜಿತ, ಘಟಕ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಪೂರ್ಣಗೊಳಿಸಿ ದಿನಾಂಕ ಜನವರಿ 15, 2023ರೊಳಗೆ ಪದವಿಗಳನ್ನು ಪಡೆಯಲು ಅರ್ಹರಾಗಿರುವ ಅಭ್ಯರ್ಥಿಗಳ ಯಾದಿಯನ್ನು ನಲ್ವತ್ತೊಂದನೆಯ ವಾರ್ಷಿಕ ಘಟಿಕೋತ್ಸವದಲ್ಲಿ ದೃಢೀಕರಿಸಲಾಗುವುದು.
ಅರ್ಹ ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ./
ಎಂ.ಫಿಲ್., ಡಿ.ಎಸ್ಸಿ, ಡಿ.ಲಿಟ್ ಅಭ್ಯರ್ಥಿಗಳು ಪದವಿಯನ್ನು ಘಟಿಕೋತ್ಸವದಲ್ಲಿ ಹಾಜರಿಯಿದ್ದು ಅಥವಾ ಗೈರುಹಾಜರಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಆದರೆ ಜನವರಿ 15 ರೊಳಗೆ ವಿವಿಧ
ಪದವಿಗಳನ್ನು ಪಡೆಯಲು ಅರ್ಹರಾದ ಎಲ್ಲಾ ಪುನರಾವರ್ತಿತ ಅಭ್ಯರ್ಥಿಗಳು ‘ಗೈರುಹಾಜರಿʼಯಲ್ಲೇ ಪದವಿ
ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳತಕ್ಕದ್ದು. ಘಟಿಕೋತ್ಸವದ ಅಧಿಕೃತ ದಿನಾಂಕವನ್ನು
ವಿಶ್ವವಿದ್ಯಾನಿಲಯದ ವೆಬ್ಸೈಟ್, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಕಟಿಸಿ
ತಿಳಿಸಲಾಗುವುದು. ಹಾಜರಿಯಲ್ಲಿ ಪದವಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಘಟಿಕೋತ್ಸವದ ಹಿಂದಿನ ದಿನ
ಪೂರ್ವಾಹ್ನ 10 ಗಂಟೆಯಿಂದ ಅಪರಾಹ್ನ 2 ಗಂಟೆಯೊಳಗೆ ಪರೀಕ್ಷಾಂಗ ಕಚೇರಿಗೆ ಖುದ್ದಾಗಿ ಭೇಟಿ
ನೀಡಿ ವಿಭಾಗದ ಘಟಿಕೋತ್ಸವ ವಹಿಯಲ್ಲಿ ಸಹಿ ಮಾಡತಕ್ಕದ್ದು.
ಎಲ್ಲಾ ಸಂಯೋಜಿತ, ಘಟಕ ಮತ್ತು ಸ್ವಾಯತ್ತ ಕಾಲೇಜುಗಳ ಪ್ರಾಂಶುಪಾಲರು
ಎಲ್ಲಾ ಅರ್ಹ ಅಭ್ಯರ್ಥಿಗಳಿಂದ ನಿಗದಿತ ಶುಲ್ಕ ಸಂಗ್ರಹಿಸಿ
ರಾಷ್ಟ್ರೀಕೃತ ಬ್ಯಾಂಕಿನ ಶಾಖೆಗಳ ಮುಖಾಂತರ ವಿಶ್ವವಿದ್ಯಾನಿಲಯದ ನಿಧಿಗೆ ಜಮೆ ಆಗುವಂತೆ ಡಿ.ಡಿ./ಚಲನ್
ಮೂಲಕ ಅಥವಾ ವಿಶ್ವವಿದ್ಯಾನಿಲಯದ ಅಂತರ್ಜಾಲದ (www.mangaloreuniversity.ac.in) quick link ನಡಿ online fees collection ಮೂಲಕ ಪಾವತಿಸಿ
ವಿದ್ಯಾರ್ಥಿಗಳ ವಿವರಗಳನ್ನು ಕುಲಸಚಿವರು(ಪ) ಕಚೇರಿಗೆ ಜನವರಿ 20, 2023 ರೊಳಗೆ
ಸಲ್ಲಿಸತಕ್ಕದ್ದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ದೃಢೀಕರಿಸಿದ ಜಾತಿ ಪ್ರಮಾಣ
ಪತ್ರವನ್ನು ಪರೀಕ್ಷಾಂಗ ವಿಭಾಗಕ್ಕೆ ಸಲ್ಲಿಸುವ ವಿವರದೊಂದಿಗೆ ಲಗತ್ತಿಸಬೇಕು.
ಕಾಲೇಜು ಪ್ರಾಂಶುಪಾಲರುಗಳು/ಸ್ನಾತಕೋತ್ತರ ವಿಭಾಗದ ಅಧ್ಯಕ್ಷರು ಅರ್ಹ
ಅಭ್ಯರ್ಥಿಗಳ ವಿವರವನ್ನು ಪರೀಕ್ಷಾಂಗ ಕುಲಸಚಿವರಿಗೆ (ಪರೀಕ್ಷಾಂಗ ವಿಭಾಗದಿಂದ ನೀಡಲ್ಪಟ್ಟ)
ನಿಗದಿತ ನಮೂನೆಯಲ್ಲಿ ಜನವರಿ 20, 2023ರೊಳಗೆ ತಲುಪುವಂತೆ ಸಲ್ಲಿಸತಕ್ಕದ್ದು. ಅಭ್ಯರ್ಥಿಗಳ
ಅರ್ಹತೆ, ಶುಲ್ಕದ ಕುರಿತ
ಹೆಚ್ಚಿನ ಮಾಹಿತಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ ಸೈಟ್ www.mangaloreuniversity.ac.in
ನ ಮೂಲಕ ತಿಳಿದುಕೊಳ್ಳಬಹುದು ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.