ಜಾಂಬೂರಿಯಲ್ಲಿ ರೋಗ ನಿರೋಧಕ ಬೆಲ್ಲದ ಸಿಹಿ

Upayuktha
0

 

ಮೂಡುಬಿದರೆ: ಬೆಲ್ಲ ಬಾಯಿಗೆ ಮಾತ್ರ ಸಿಹಿ ಅಲ್ಲ. ಅರೋಗ್ಯಕ್ಕೂ ಸಿಹಿಯೇ. ಇಂಥ ಶುದ್ದವಾದ ಬೆಲ್ಲ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಪ್ರಯುಕ್ತ ನಡೆಯುತ್ತಿರುವ ಆಹಾರ ಮೇಳದ ಮಳಿಗೆಯಲ್ಲಿ ಲಭ್ಯವಿತ್ತು.


ಮಂಡ್ಯದ ದೇವೇಗೌಡ ಹಲವು ವರ್ಷಗಳಿಂದಲೂ ಗೋ ಅಧಾರಿತ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಸುಗಳ ಗಂಜಲವನ್ನು ಹಾಕಿ ಕಬ್ಬನ್ನು ಬೆಳೆಯುತ್ತಿದ್ದಾರೆ. ಯಾವುದೇ ರಾಸಯನಿಕ ಬಳಸದೆ ವಿಶೇಷ ರೀತಿಯಲ್ಲಿ ಬೆಲ್ಲವನ್ನು ಸಿದ್ಧಪಡಿಸುತ್ತಾರೆ. ಈ ಬೆಲ್ಲವನ್ನು ಅವರು ಮಳಿಗೆಯಲ್ಲಿ ಮಾರಾಟಕ್ಕಿಟ್ಟಿದ್ದರು. ಜನರು ಈ ಮಳಿಗೆಗೆ ಭೇಟಿ ನೀಡಿ ಬೆಲ್ಲ ಖರೀದಿಸಿದರು. ಪುಡಿ ಬೆಲ್ಲ, ಗರಿ ಅಚ್ಚುಬೆಲ್ಲ, ಸಿಲೆಂಡರ್ ಬೆಲ್ಲ, ಸಣ್ಣಅಚ್ಚಿನ ಬೆಲ್ಲವನ್ನು ಜನರು ಖರೀದಿಸಿದರು.


ಈ ಬೆಲ್ಲದಿಂದ ಜೀರ್ಣಕ್ರಿಯೆ , ಮಲಬದ್ಧತೆ, ಕೀಲು ನೋವು ಕಡಿಮೆ ಅಗುತ್ತೆ. ರಕ್ತ ಶುದ್ಧಿಯಾಗುತ್ತದೆ. ಇದರ ರೋಗನಿರೋಧಕ ಶಕ್ತಿ ಅಪಾರ ಎಂದು ದೇವೇಗೌಡ ಅವರು ಹೇಳುತ್ತಾರೆ.


ವರದಿ: ಮಹಾಂತೇಶ ಚಿಲವಾಡಗಿ

ದ್ವಿತೀಯ ವರ್ಷ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

ಎಸ್.ಡಿ.ಎಂ ಸ್ನಾತಕೋತ್ತರಕೇಂದ್ರ, ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top