ಡಿ.25 ರಂದು ಧನುರ್ಮಾಸ ಸಂಗೀತೋತ್ಸವ

Upayuktha
0

ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಹಾಗೂ ಸಾಹಿತಿ- ಸಂಘಟಕ ಡಾ.ಸಿಸಿರಾ ರವರಿಗೆ 'ದತ್ತ ಸಾಮ್ರಾಟ್’ ಪ್ರಶಸ್ತಿ ಪ್ರದಾನ


ಬೆಂಗಳೂರು: ರಾಜರಾಜೇಶ್ವರಿ ನಗರದ ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ಇದೇ ಭಾನುವಾರ ಡಿ.25 ಸಂಜೆ 5.00ಕ್ಕೆ ದತ್ತಶ್ರೀ ಸಾಂಸ್ಕೃತಿಕ ವೇದಿಕೆ ವತಿಯಿಂದ ಧನುರ್ಮಾಸ ಸಂಗೀತೋತ್ಸವ - ದತ್ತ ಸಾಮ್ರಾಟ್ ಪ್ರಶಸ್ತಿ ಪ್ರದಾನ- ನೃತ್ಯ ವೈಭವ ಕಾರ‍್ಯಕ್ರಮ ಆಯೋಜಿಸಲಾಗಿದೆ.


ತೋಟಗಾರಿಕೆ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಮುನಿರತ್ನ ಸಮಾರಂಭ ಉದ್ಘಾಟಿಸಲಿದ್ದು, ಎಂ ಇ ಎಸ್ ರಂಗಶಾಲೆ ಪ್ರಾಂಶುಪಾಲ ಡಾ.ಅಶ್ವಥ್ ನಾರಾಯಣ ಕೆ.ಪಿ ಅಧ್ಯಕ್ಷತೆಯಲ್ಲಿ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಹಾಗೂ ಸಾಹಿತಿ- ಸಂಘಟಕ ಡಾ.ಸಿಸಿರಾ ರವರಿಗೆ ‘ದತ್ತ ಸಾಮ್ರಾಟ್’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುವ ಈ ಕಲಾ ಸಮ್ಮಿಲನದಲ್ಲಿ ಮುಖ್ಯ ಅತಿಥಿಗಳಾಗಿ ಭಾರತ ವಿಕಾಸ ಪರಿಷತ್ ಅಧ್ಯಕ್ಷ ರಘುನಾಥ್, ಪತ್ರಕರ್ತ ನ.ಶ್ರೀ. ಸುಧೀಂದ್ರರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಚಂದ್ರಶೇಖರ್ ಮೊದಲಾದ ಗಣ್ಯರು ಭಾಗವಹಿಸುವರು.


ಗುರು ಶ್ರೀಮತಿ ಮೋನಿಷಾ ನವೀನ್ ರವರ ನಾಟ್ಯ ಸನ್ನಿಧಿ ಭರತನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಸಂತವಾಣಿ ಸುಧಾಕರ್, ರಾಜೇಶ್ ಆನೇಕಲ್, ದತ್ತಶ್ರೀ, ರವಿ ಇಗ್ಗಲೂರು, ಚೈತ್ರ ಹೆಬ್ಬಗೋಡಿ, ವೀರೇಶ್, ನರಸಿಂಹ, ವಾಸುಕಿ ಪ್ರಸಾದ್, ಭಾಗ್ಯಲಕ್ಷ್ಮಿ, ಸಾಯಿ ಪವನ್ ಹಾಗು ಸತ್ಯವತಿ ರವೀಂದ್ರ ರವರ ತಂಡದಿಂದ ಸುಮಧುರ ಗಾಯನ ಸಂಜೆ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷರಾದ ಭಾಸ್ಕರ್ ಮೂರ್ತಿ ತಿಳಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top