ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಓರಿಯಂಟೇಷನ್‌ ತರಬೇತಿ : ಉಡುಪಿ

Chandrashekhara Kulamarva
0



ರಜತಾದ್ರಿ :  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಜತಾದ್ರಿಯ ಜಿಲ್ಲಾಪಂಚಾಯತ್ ಡಿ. .ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರ ಕುರಿತ ಎರಡು ದಿನಗಳ ಓರಿಯೆಂಟೇಷನ್ ತರಬೇತಿ ಕಾರ್ಯಕ್ರಮವನ್ನು ಮಂಗಳವಾರ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಉದ್ಘಾಟಿಸಿದರು.


ಜಿಲ್ಲಾಪಂಚಾಯತ್ ಸಿ.ಇ.ಓ ಪ್ರಸನ್ನ ಹೆಚ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಪೊಲೀಸ್  ಅಧೀಕ್ಷಕ ಹಾ ಕೆ ಅಕ್ಷಯ್ಮಚ್ಚೀಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾಕಾನೂನು ಸೇವಾಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್  ಹಾಗೂ ಮತ್ತಿತರರು ಉಪಸ್ಥಿತರಿದ್ದರು. 


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾವಿವೇಕಾನಂದ ಸ್ವಾಗತಿಸಿ, ಮಹಿಳಾ ಶಕ್ತಿ ಕೇಂದ್ರದ ದೀಪಾ ನಿರೂಪಿಸಿ, ಶಾರದ ವಂದಿಸಿದರು.


Post a Comment

0 Comments
Post a Comment (0)
To Top