ಉಡುಪಿ: ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವತಿಯಿಂದ ಬುಧವಾರ (ನ. 30) ಪೂರ್ಣಪ್ರಜ್ಞ ಕಾಲೇಜಿನಲ್ಲಿ ವಿದ್ಯಾರ್ಥಿ-ವಿಜ್ಞಾನಿಗಳ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನೈನಿತಾಲ್ ನ ಆರ್ಯಭಟ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಅಬ್ಸರ್ವೇಶನಲ್ ಸೈನ್ಸಸ್ನ ನಿರ್ದೇಶಕರಾದ ಪ್ರೊ. ದೀಪಂಕರ್ ಬ್ಯಾನರ್ಜಿ ಮತ್ತು ಇಸ್ರೋದ ಯು.ಆರ್.ರಾವ್ ಸ್ಯಾಟಲೈಟ್ ಸೆಂಟರ್ನ ಹಿರಿಯ ವಿಜ್ಞಾನಿ ಡಾ. ಶಂಕರಸುಬ್ರಮಣ್ಯಂ ಕೆ. ಅವರು ಖಗೋಳವಿಜ್ಞಾನ ಮತ್ತು ಆದಿತ್ಯ ಎಲ್1 ಮಿಷನ್ ಕುರಿತು ವಿವಿಧ ಕಾಲೇಜುಗಳ 117 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಡಾ. ಶಂಕರ್ ಸುಬ್ರಮಣ್ಯಂ ಅವರು, ಆದಿತ್ಯ L1 ಮಿಷನ್ನ ಪ್ರಧಾನ ವಿಜ್ಞಾನಿಯಾಗಿದ್ದು, ಪ್ರೊ. ದೀಪಂಕರ್ ಬ್ಯಾನರ್ಜಿ ಅವರು ಆದಿತ್ಯ L1 ಮಿಷನ್ ಬೆಂಬಲ ಕೋಶದ ಮುಖ್ಯಸ್ಥರಾಗಿದ್ದಾರೆ.
ಆನಂದತೀರ್ಥ ಪಿಯು ಕಾಲೇಜು, ಮಣಿಪಾಲ ಪಿಯು ಕಾಲೇಜು (ಪ್ರೌಢಶಾಲಾ ವಿಭಾಗ), ಎಂಜಿಎಂ ಕಾಲೇಜು, ಕೆನರಾ ಕಾಲೇಜು, ಎಂಐಟಿ ಮಣಿಪಾಲ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಖಗೋಳ ಶಾಸ್ತ್ರ, ಇಸ್ರೋ, ಆದಿತ್ಯ ಎಲ್1 ಮಿಷನ್ ಕುರಿತು ವಿವಿಧ ಪ್ರಶ್ನೆಗಳನ್ನು ಕೇಳಿದರು ಮತ್ತು ಇಸ್ರೋದ ಭವಿಷ್ಯದ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಘವೇಂದ್ರ ಎ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರತಿಭಾ ಸಿ. ಆಚಾರ್ಯ, ಸಂಯೋಜಕ ಶ್ರೀ ಅತುಲ್ ಭಟ್ ಮತ್ತು ಭೌತಶಾಸ್ತ್ರ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ಈ ಸಂವಾದವನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ಪ್ರಾಯೋಜಿಸಿದ್ದು, ಮತ್ತು ಕಾರ್ಯಕ್ರಮದ ನಂತರ ಗುರು, ಶನಿ ಗ್ರಹಗಳು ಮತ್ತು ಚಂದ್ರನ ಕುಳಿಗಳನ್ನು ವೀಕ್ಷಿಸಲು ಆಕಾಶವೀಕ್ಷಣೆಯನ್ನು ಮಾಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ