ಕ್ರೀಡೆಗಳು ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆಗಳನ್ನು ಒಳಾಂಗಣ ಆಟ ಮತ್ತು ಹೊರಾಂಗಣ ಆಟ ಎಂದು ವಿಂಗಡಿಸಿ ಕೊಳ್ಳಬಹುದು. ಒಳಾಂಗಣ ಆಟಗಳಲ್ಲಿ ಜನಪದ ಆಟವಾಗಿರುವ ಚೆನ್ನೆಮಣೆ ಆಟವೂ ಒಂದು. ತುಳುವಿನ ತಿಂಗಳಾದ ಆಟಿಯ ಕಾಲವು ಹಳ್ಳಿಯಲ್ಲಿ ಜೀವಿಸುತ್ತಿರುವ ಜನರಿಗೆ ಈ ಆಟಿ ಎಂಬ ತಿಂಗಳು ಬಹಳ ಕಷ್ಟದ ತಿಂಗಳು ಆಗಿ ಇರುತ್ತಿತ್ತು. ರೈತರಿಗೆ ತನ್ನ ಹೋಲ -ಗದ್ದೆಯೇ ಇವರ ಜೀವನದ ಬೆನ್ನೆಲುಬು ಆಗಿದೆ. ಆದರೆ ಆ ಆಟಿ ತಿಂಗಳಲ್ಲಿ ಬಿಟ್ಟುಬಿಡದೆ ಮಳೆ ಸುರಿಯುವುದು ವಾಡಿಕೆಯಾಗಿದೆ. ಇದರಿಂದ ಈ ಸಮಯದಲ್ಲಿ ಗದ್ದೆಗಳಲ್ಲಿ ಬೇಸಾಯ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಈ ಬಿಡುವಿನ ದಿನಗಳಲ್ಲಿ ಸಮಯವನ್ನು ಕಳೆಯಲು ಮನೆಯವರೆಲ್ಲ ಸೇರಿ ಆಡುವ ಆಟವೇ ಚೆನ್ನ-ಮನೆ ಆಟ.
ಆಟದ ನಿಯಮ:
ಈ ಆಟಕ್ಕೆ ಚೆನ್ನೆಕಾಯಿ ಮತ್ತು 8 ಗುಂಡಿಗಳಿರುವ ಮಣೆ (ಚೆನ್ನೆಮಣೆ)ಯು ಬೇಕಾಗುತ್ತದೆ. ಇದರ ಒಂದು ಬದಿಯಲ್ಲಿ ಏಳು ಮನೆಗಳು ಮತ್ತು ಇನ್ನೊಂದು ಬದಿಯಲ್ಲಿ ಏಳು ಮನೆಗಳು ಇರುವುದನ್ನು ಗಮನಿಸಬಹುದು. ಈ ಆಟವನ್ನು ಹಾಡಲು ಕನಿಷ್ಠ ಎರಡು ಮಂದಿ ಬೇಕಾಗುತ್ತದೆ. ಪ್ರಾರಂಭದಲ್ಲಿ ಏಳು ಮನೆಯಲ್ಲಿಯೂ ನಾಲ್ಕು ನಾಲ್ಕು ಕಾಯಿಗಳಂತೇ ಇಡಬೇಕು. ನಂತರದಲ್ಲಿ ತನ್ನ ಏಳು ಮನೆಗಳಲ್ಲಿ ಯಾವುದಾದರೂ ಒಂದು ಮನೆಯಿಂದ ಕಾಯಿಗಳನ್ನು ತೆಗೆದುಕೊಂಡು ಎಡದಿಂದ ಬಲ ಭಾಗಕ್ಕೆ ಒಂದು ಮನೆಗೆ ಪ್ರತಿ ಒಂದರಂತೆ ಕಾಯಿಗಳನ್ನು ಹಾಕುತ್ತಾ ಹೋಗಬೇಕು. ಕಾಯಿಗಳು ಮುಗಿದ ಬಳಿಕ ತನ್ನ ಮುಂದಿನ ಮನೆಯಿಂದ ತೆಗೆದುಕೊಂಡು ಮೊದಲಿನಂತೆ ಕಾಯಿಗಳನ್ನು ಹಾಕುತ್ತಾ ಹೋಗುವ ಸಂದರ್ಭದಲ್ಲಿ ತನ್ನ ಕೈಯಲ್ಲಿ ಕಾಯಿಗಳು ಒಂದು ವೇಳೆ ಮುಗಿದರೆ ಕೊನೆಗೆ ಹಾಕಿದ ಮನೆಯ ಮುಂದೆ ಒಂದು ಮನೆ ಖಾಲಿ ಇದ್ದು ಅದರ ಮುಂದಿನ ಮನೆಯಲ್ಲಿ ಇರುವ ಕಾಯಿಗಳು ನಮ್ಮದಾಗುತ್ತದೆ. ಈ ರೀತಿ ಸಿಗುವಂತಹ ಚೆನ್ನಕಾಯಿಯನ್ನು ತುಳು ವಿನಲ್ಲಿ ಪೆರ್ಗ ಮತ್ತು ಕನ್ನಡದಲ್ಲಿ ಕರು ಹಾಕಿತು ಎಂದು ಹೇಳುವ ಮಾತಿದೆ. ಹೀಗೆ ಆಟವನ್ನು ಮುಂದುವರಿಸುತ್ತಾ ಹೋದಾಗ ಕೊನೆಯಲ್ಲಿ ಯಾರ ಬಳಿ ಅತೀ ಹೆಚ್ಚು ಕಾಯಿಗಳು ಸಂಗ್ರಹ ಆಗಿದೆಯೋ ಅವರು ಈ ಆಟದಲ್ಲಿ ಗೆಲ್ಲುತ್ತಾರೇ.
ಚೆನ್ನೆ ಮಣೆ ಆಟದಲ್ಲಿ ಹಲವಾರು ವಿವಿಧ ಆಟಗಳು ಇದೆ ಅವುಗಳೆಂದರೆ ರಾಜ-ಮಂತ್ರಿ, ಸೈನಿಕ ಆಟ, ರಾಜ-ರಾಣಿ ಹೀಗೆ ಹತ್ತು ಹಲವು ಬಗೆಯ ಆಟವನ್ನು ನೋಡಬಹುದು. ಈ ಮೇಲಿನ ಆಟಗಳನ್ನು ಎಲ್ಲರೂ ಆಡುವಂತಿಲ್ಲ ಅಂದರೆ ಅಣ್ಣ- ತಮ್ಮ, ಗಂಡ -ಹೆಂಡತಿ, ಅಪ್ಪ -ಮಗ ಮುಂತಾದವರು, ಏಕೆ ಆಡಬಾರದೆಂದರೆ ಸೋಲು ಗೆಲುವಿನ ಸಂದರ್ಭದಲ್ಲಿ ಮನಸ್ತಾಪ ಬೆಳೆಯುತ್ತದೆ ಎಂದು ಹಿಂದಿನ ಕಾಲದ ಹಿರಿಯರು ಹೇಳಿದ ಮಾತಾಗಿದೆ.
ಆಧುನಿಕ ಯುಗದಲ್ಲಿ ಚೆನ್ನೆಮಣೆ ಆಟ ಶಾಲಾ ಕಾಲೇಜುಗಳಲ್ಲಿ ಕೇವಲ ಸ್ಪರ್ಧೆಗಳಿಗಾಗಿ ಉಳಿದಿವೆಯೇ ಹೊರತು ಮನೋರಂಜನೆಗಾಗಿ ಅಥವಾ ಸಂಸ್ಕೃತಿ ಸಂಪ್ರದಾಯವನ್ನು ಉಳಿಸಲು ಅಲ್ಲ. ಇಂತಹ ಆಟಗಳನ್ನು ಮಕ್ಕಳಿಗೆ ಪರಿಚಯಿಸಿ ಅವುಗಳನ್ನು ಉಳಿಸಿ, ಬೆಳೆಸಿ ಮುನ್ನಡಿಸುವ ಮಹತ್ತರವಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲೆ ಇದೆ.
-ವೆನಿತ್ ಮುಕ್ಕೂರು
ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ