ಡಿ.25: ನಯನ ಸಭಾಂಗಣದಲ್ಲಿ ಪ್ರಣವಾಂಜಲಿ ನೃತ್ಯಕಲಾ ಸಂಭ್ರಮ

Upayuktha
0

ಬೆಂಗಳೂರು: ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯು ನೃತ್ಯ ಕಲಾ ಸಂಭ್ರಮ-2022, ಒಂದು ವಿಶಿಷ್ಟ ನೃತ್ಯ ಹಬ್ಬವನ್ನು ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಡಿಸೆಂಬರ್ 25 ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ, ಏರ್ಪಡಿಸಿದೆ.


ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ತಮೋಹ ಆರ್ಟ್ಸ್ ಫೌಂಡೇಶನ್ ಸಂಸ್ಥೆಯ, ಪದ್ಮಿನಿ ಪ್ರಿಯ ನೃತ್ಯ ಕಲಾ ಅಕಾಡೆಮಿ ಸಂಸ್ಥೆಯ, ಕಾಳಿಕಾಂಬ ಆರ್ಟ್ಸ್ ಸಂಸ್ಥೆಯ, ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯ ಹಾಗೂ ಕುಶಾಲನಗರದ ಕುಂದಣ ನೃತ್ಯಾಲಯ, ಸಂಸ್ಥೆಯ ಮಕ್ಕಳಿಂದ ಭರತನಾಟ್ಯ, ಜಾನಪದ ನೃತ್ಯ ಪ್ರದರ್ಶನಗಳಿದ್ದು, ಈಶ್ವರಿ ಕಲಾ ಸಂಗಮ ಸಂಸ್ಥೆಯ ವತಿಯೆಂದ ಕಂಸ ವಧೆ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್ ಚಂದ್ರಶೇಖರ್, ಬೆಂಗಳೂರು ನಗರಜಿಲ್ಲೆ ಹಾಗೂ ವಿದುಷಿ ಶ್ರೀಮತಿ ಉಷಾ ಬಸಪ್ಪ, ನಿರ್ದೇಶಕಿ ಪದ್ಮಿನಿ ಪ್ರಿಯ ನೃತ್ಯ ಕಲಾ ಅಕಾಡೆಮಿ, ಬೆಂಗಳೂರು ರವರು ಆಗಮಿಸಲಿದ್ಧಾರೆ ಎಂದು ಪ್ರಣವಾಂಜಲಿ ಸಂಸ್ಥೆಯ ನಿರ್ದೇಶಕಿ ವಿದುಷಿ ಶ್ರೀಮತಿ ಪವಿತ್ರ ಪ್ರಶಾಂತ್ ರವರು ತಿಳಿಸಿದ್ಧಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top