ವಿವಿ ಕಾಲೇಜು: ಎನ್‌ಸಿಸಿಯಿಂದ ರಕ್ತದಾನ ಶಿಬಿರ

Upayuktha
0

ಮಂಗಳೂರು: ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹದ ಅಂಗವಾಗಿ, ನಗರದ ವಿಶ್ವವಿದ್ಯಾನಿಲಯದ ಎನ್‌ಸಿಸಿ ಭೂದಳ ಮತ್ತು ನೌಕಾದಳ ಘಟಕಗಳು ಹಾಗೂ 18 ಕರ್ನಾಟಕ ಬೆಟಾಲಿಯನ್‌ (ಎನ್‌ಸಿಸಿ) ನೇತೃತ್ವದಲ್ಲಿ, ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾನುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.


ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, 18 ಕರ್ನಾಟಕ ಬೆಟಾಲಿಯನ್‌ (ಎನ್‌ಸಿಸಿ) ನ ಕರ್ನಲ್‌ ಎನ್‌ ಆರ್‌ ಭಿಡೆ, ಕಾಲೇಜಿನ ಎನ್‌ಸಿಸಿ ಭೂದಳದ ಅಧಿಕಾರಿ ಮೇಜರ್‌ ಡಾ. ಜಯರಾಜ್‌ ಎನ್‌, ನೌಕಾದಳದ ಲೆಫ್ಟಿನಂಟ್‌ ಡಾ. ಯತೀಶ್‌ ಕುಮಾರ್‌ ಸೇರಿದಂತೆ ಇತರ ಅಧಿಕಾರಿಗಳು, ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು. ವೆನ್ಲಾಕ್‌ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top