ಕಾಸರಗೋಡು: ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ನ.29 ರಂದು ಡಾ ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.00 ಘಂಟೆಯ ತನಕ 'ಸಾಹಿತ್ಯಗಾನ- ನೃತ್ಯವೈಭವ' ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಜರುಗಲಿರುವುದು. ಡಾ ವಾಣಿಶ್ರೀ ಕಾಸರಗೋಡು ಇವರು ಕಾರ್ಯಕ್ರಮದ ನಿರೂಪಣೆ ಮಾಡುವರು.
ಗುರುರಾಜ್ ಕಾಸರಗೋಡು, ಡಾ. ವಾಣಿಶ್ರೀ ಕಾಸರಗೋಡು, ಸನುಷ ಸುನಿಲ್, ಅಹನಾ ಎಸ್ ರಾವ್, ಭಾಸ್ಕರ್ ಅಡೂರ್, ಲೇಖನ್ ಗೌಡ, ಖುಷಿ, ರೋಹನ್, ಕ್ರಿತ್ವಿಕ್, ಆಯುಷ್, ಸನುಷಾ ಸುಧಾಕರನ್, ಹರೀಶ್ ಪಂಜಿಕಲ್ಲು, ವಿಜಿತಾ ಕೇಶವನ್, ನಿಹಾರಿಕ ಕಾಟುಕುಕ್ಕೆ, ವಿಷ್ಣು ಸುಧಾಕರನ್, ಕೃಪೇಶ್, ಉಷಾ ಸುಧಾಕರನ್, ಪೂಜಾ ಶ್ರೀ, ಕೀರ್ತಿ, ಧನ್ವಿತ್ ಕೃಷ್ಣ, ಪ್ರಥಮ್ಯ ಯು ವೈ ಮುಂತಾದ ಕಲಾವಿದರು ಭರತ ನಾಟ್ಯ, ಜಾನಪದ, ಭಾವಗೀತೆ, ಸೆಮಿ ಕ್ಲಾಸಿಕಲ್, ಕ್ಲಾಸಿಕಲ್, ಹೀಗೆ ಹಲವು ತರದ ವೈವಿದ್ಯಮಯ ನೃತ್ಯ ರೂಪಕ ಹಾಗೂ ಸುಶ್ರಾವ್ಯವಾದ ಹಾಡುಗಾರಿಕೆಯಿಂದ ಮನ ರಂಜಿಸಲಿದ್ದಾರೆ ಎಂದು ಸಂಸ್ಥೆಯ ಪತ್ರಿಕಾ ಪ್ರಕಟನೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ