ಬಹುಮುಖ್ಯವಾಗಿ ಸರಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಯಂ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ 2006 ಏಪ್ರಿಲ್ ಅನಂತರದಲ್ಲಿ ಸೇವೆಗೆ ಸೇರ್ಪಡೆ ಗೊಂಡ ನೌಕರರಿಗೆ ಹಳೆಯ ಪಿಂಚಣಿಯ ಬದಲಾಗಿ ಹೊಸ ಪಿಂಚಣಿ ನೀಡಿ ಅವರ ನಿವೃತ್ತಿಯ ಬದುಕನ್ನು ಇನ್ನಷ್ಟು ಹಸನಗೊಳಿಸುತ್ತೇವೆ ಅನ್ನುವ ಭರವಸೆಯೊಂದಿಗೆ 2004 ರಲ್ಲಿ ಕೇಂದ್ರ ಸರ್ಕಾರ ಹಾಗೂ 2006ರಿಂದ ರಾಜ್ಯ ಸರ್ಕಾರ ತನ್ನ ನೌಕರರಿಗೆ ಹೊಸ ಪಿಂಚಣಿ ಅನುಷ್ಠಾನಗೊಳಿಸುವುದರ ಮೂಲಕ ಅವರ ನಿವೃತ್ತಿಯ ಅನಂತರ ಇಡಿ ಕುಟುಂಬವನ್ನು ಮರಣ ಕೂಪಕ್ಕೆ ತಳ್ಳುವ ಹೊಸ ಪಿಂಚಣಿ ಯೇೂಜನೆ ಜಾರಿಗೊಳಿಸಿದೆ ಅಂದರು ತಪ್ಪಾಗಲಾರದು; ಮಾತ್ರವಲ್ಲ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದುಡಿದು ನಿವೃತ್ತಿ ಹೊಂದುವ ಹೊಂದಿದ ಶಿಕ್ಷಕರಿಗೆ ಒಂದು ನಯಾ ಪೈಸೆ ಪಿಂಚಣಿಯೂ ಇಲ್ಲ. ಗ್ರ್ಯಾಚುಟಿಯೂ ಇಲ್ಲದ ತರದಲ್ಲಿ ಬರಿಗೈಯಲ್ಲಿ ಮನೆಗೆ ಕಳುಹಿಸಿಕೊಡುವ ಅತ್ಯಂತ ಅಮಾನವೀಯ ಕೆಲಸಕ್ಕೆ ಕನಾ೯ಟಕ ರಾಜ್ಯ ಸರಕಾರ ಮುಂದಾಗಿರುವುದು ಅತ್ಯಂತ ದುಃಖಕರ ಸಂಗತಿ.
ತಹ ನೌಕರರ ಶೇೂಷಣೆ ಯಾವುದೆ ಖಾಸಗಿ ವಲಯದಲ್ಲಿಯೂ ನಡೆಯಲು ಸಾಧ್ಯವಿಲ್ಲ. ಅಂತಹ ಘೇೂರ ಮಾನವ ಹಕ್ಕಿನ ಉಲಂಘನೆ ಸರಕಾರಿ ವಲಯದಲ್ಲಿ ನಡೆಯುತ್ತಿದೆ ಅನ್ನುವ ಸತ್ಯ ವಿಚಾರ ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕಾಗಿದೆ. ಯಾವುದೇ ಒಬ್ಬ ಸರಕಾರಿ ನೌಕರ ತಾನು 20 ವರುಷಗಳ ಸೇವೆ ಸಲ್ಲಿಸಿ ನಿವೃತ್ತಿಯಾದರೂ ಕೂಡ ಇಂದಿನ ಹೊಸ ಪಿಂಚಣಿ ಲೆಕ್ಕಾಚಾರ ಪ್ರಕಾರ ಮಾಸಿಕ 2500 ರೂ.ಗಿಂತ ಹೆಚ್ಚು ಪಿಂಚಣಿ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಅವರು ನಿವೃತ್ತಿಯ ಅನಂತರ ನೆಮ್ಮದಿಯಿಂದ ಬದುಕ ಬೇಕೆಂಬ ಸರಕಾರಿ ನಿಯಮ ಎಲ್ಲಿಗೆ ಬಂದು ನಿಂತಿದೆ? ಸುಪ್ರೀಂ ಕೇೂರ್ಟ್, ನ್ಯಾಯಾಂಗ ಪರಿಣಿತರು, ಸಂವಿಧಾನ ತಜ್ಞರು ಹೇಳುವುದೆಂದರೆ ಪ್ರತಿಯೆಾಬ್ಬ ನೌಕರರನ್ನು ತನ್ನ ಸೇವೆಗೆ ತಕ್ಕ ನ್ಯಾಯಯುತವಾದ ಪಿಂಚಣಿ ಪಡೆಯುವುದು ಪ್ರತಿಯೊಬ್ಬ ನೌಕರನ ಮೂಲ ಭೂತ ಹಕ್ಕು ಮಾತ್ರವಲ್ಲ ಬದುಕಿನ ಹಕ್ಕು ಕೂಡ. ಅಂದರೆ ಇಲ್ಲಿ ಸರ್ಕಾರಿ ನೌಕರರ ಬದುಕಿನ ಹಕ್ಕನೇ ಸರ್ಕಾರ ಕಸಿದುಕೊಂಡಿದೆ ಅಂದರೂ ತಪ್ಪಾಗಲಾರದು?
ಈ ಹೊಸ ಪಿಂಚಣಿ ಅನ್ನುವ ಕರಾಳ ಪಿಂಚಣಿ ಕೇವಲ ಸರಕಾರಿ ನೌಕರರಿಗೆ ಮತ್ತು ಅನುದಾನಿತ ನೌಕರರಿಗೆ ಮಾತ್ರ ಅನ್ವಯಿಸುತ್ತದೆ ಹೊರತು ಜನಪ್ರತಿನಿಧಿಗಳಿಗಾಗಲಿ ನ್ಯಾಯಾಲಯದ ನೌಕರರಿಗಾಗಲಿ ಈ ಕರಾಳ ಪಿಂಚಣಿಅನ್ವಯಿಸದಂತೆ ಅನುಷ್ಠಾನಗೊಳಿಸಿರುವುದರ ಅರ್ಥವೇನು?
ಈಗಾಗಲೇ ಈ ಹೊಸ ಪಿಂಚಣಿಯ ಮಾರಕವಾದ ಅಮಾನವೀಯ ಶೇೂಷಣೆಯನ್ನು ಅರ್ಥಮಾಡಿಕೊಂಡ ಕೆಲವು ರಾಜ್ಯ ಸರಕಾರಗಳು ಈ ಹೊಸ ಪಿಂಚಣಿಯನ್ನು ವಾಪಾಸು ಪಡೆದು ಹಳೆ ಪಿಂಚಣಿ ಅರ್ಥಾತ್ ನಿಶ್ಚಿತ ಪಿಂಚಣಿಯನ್ನು ಅನುಷ್ಠಾನಗೊಳಿಸುವ ದೃಢ ನಿರ್ಧಾರ ತೆಗೆದುಕೊಂಡಿರುವುದು ಅತ್ಯಂತ ಶ್ಲಾಘನೀಯವೇ ಸರಿ.
ಈ ನಿಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ಕೂಡ ಹಳೆ ಪಿಂಚಣಿ ವಂಚಿತ ಹಾಗೂ ಪಿಂಚಣಿಯೇ ಸಿಗದ ಅನುದಾನಿತ ಖಾಯಂ ಶಿಕ್ಷಕರು ತಮ್ಮ ಹೇೂರಾಟವನ್ನು ಅತ್ಯಂತ ಮಾನವೀಯ ನೆಲೆಯಲ್ಲಿ ಶಾಂತ ರೀತಿಯಲ್ಲಿ ಮಾಡಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಮುಂದಾಗಿರುವುದು ಅತ್ಯಂತ ಸೂಕ್ತ ದಿಟ್ಟ ನಿಧಾ೯ರ ಕೂಡ. ಇದನ್ನು ದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಿ ಸರ್ಕಾರ ಮತ್ತು ಸಾರ್ವಜನಿಕರ ಗಮನ ಸೆಳೆಯಲು ಪ್ರತಿಯೊಬ್ಬ ನೌಕರರ ತನು ಮನ ಸಮರ್ಪಣೆಯೊಂದಿಗೆ ದಿನಾಂಕ 23ರಂದು ಉಡುಪಿ ಜಿಲ್ಲೆಯಲ್ಲಿ ಮತ್ತು ಡಿಸೆಂಬರ್ 19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಲು ನಿಶ್ಚಯಿಸಿರುವ ಅನಿರ್ದಿಷ್ಟ ಹೇೂರಾಟದಲ್ಲಿ ತಮ್ಮ ಅಧಿಕಾರ ಅಂತಸ್ಥ ಸಣ್ಣಪುಟ್ಟ ಸಮಸ್ಯೆಗಳನ್ನು ಬದಿಗಿಟ್ಟು "ಮಾಡು ಅಥವಾ ಮಡಿ" ಅನ್ನುವ ನಿರ್ಧಾರದೊಂದಿಗೆ ಭಾಗವಹಿಸಿದ್ದೇ ಆದರೆ ಹೊಸ ಪಿಂಚಣಿಗೆ ಇತಿಶ್ರೀ ಹಾಡಿ ಹಳೆ ಪಿಂಚಣಿಯನ್ನು ಪಡೆಯಲು ಖಂಡಿತವಾಗಿಯೂ ಸಾಧ್ಯವಿದೆ. ಅದು ಬಿಟ್ಟು ಅರೆಬರೆ ಮನಸ್ಸಿನಲ್ಲಿ ಸುಮ್ಮನೆ ಮನೆಯಲ್ಲಿ ಕೂತು ಬಿಟ್ಟರೆ ತಮ್ಮ ನಿವೃತ್ತಿಯ ಬದುಕು ಅತ್ಯಂತ ಕಠಿಣ ದಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದುದರಿಂದ ತಮ್ಮ ಮತ್ತು ತಮ್ಮ ಮಕ್ಕಳ ಮುಂದಿನ ಭವಿಷ್ಯದ ಬದುಕನ್ನು ದೃಷ್ಟಿಯಲ್ಲಿ ಇಟ್ಟು ಕೊಂಡು ಪ್ರತಿಯೊಬ್ಬ ಸರಕಾರಿ ಮತ್ತು ಖಾಸಗಿ ಅನುದಾನಿತ ಖಾಯಂ ನೌಕರರು ಭಾಗವಹಿಸ ಬೇಕಾಗಿದೆ ಅನ್ನುವುದು ಪ್ರತಿಯೊಬ್ಬ ಪಿಂಚಣಿ ವಂಚಿತ ನೌಕರನ ಒಕ್ಕೊರಲಿನ ಧ್ವನಿಯಾಗಬೇಕು.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ