ಮಂಗಳೂರು: ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಕೆನರಾ ಕಾಲೇಜಿನಲ್ಲಿ ಹಿಂದಿ, ಕನ್ನಡ ಮತ್ತು ಸಂಸ್ಕೃತ ಸಂಘಗಳ ವತಿಯಿಂದ 'ಭಾಷಾ ವಿವಿಧತೆಯಲ್ಲಿ ರಾಷ್ಟ್ರೀಯ ಐಕ್ಯತೆ' ಎಂಬ ವಿಚಾರವಾಗಿ ಉಪನ್ಯಾಸ ಗೋಷ್ಠಿ ನಡೆಯಿತು. ಸಂತ ಆಗ್ನೆಸ್ ಕಾಲೇಜಿನ ಕಲೆ ಮತ್ತು ಸಾಹಿತ್ಯ ವಿಭಾಗದ ಡೀನ್ ಡಾ. ಆರ್. ನಾಗೇಶ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದು, ವಿಭಿನ್ನ ಭಾಷೆಗಳು ದೇಶದ ಜನರನ್ನು ಬೆಸೆಯುತ್ತದೆ. ನಾವು ಅನೇಕ ಭಾಷೆಗಳನ್ನು ಬಲ್ಲವರಾಗಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ನುಡಿದರು.
ಪ್ರಭಾರ ಪ್ರಾಂಶುಪಾಲೆ ಶ್ರೀಮತಿ ದೇಜಮ್ಮ ಅಧ್ಯಕ್ಷತೆ ವಹಿಸಿದ್ದು, ಮಾತು ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ವಿದ್ಯಾಸಂಸ್ಥೆಯಲ್ಲಿ ಧರ್ಮದ ಸಂಘರ್ಷ ಬೇಡ. ಭಾಷೆ ವೇಷ ಆಹಾರ ಎಲ್ಲವುಗಳ ವಿನಿಮಯ ಏಕತೆಯನ್ನು ಸೂಚಿಸುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳಾದ ಮನಸ್ವಿ, ಸೋನಾಲಿ ಪ್ರಾರ್ಥಿಸಿ, ಸಂಭ್ರಮ ಸ್ವಾಗತಿಸಿದರು.
ಹಿಂದಿ, ಕನ್ನಡ, ಸಂಸ್ಕೃತ ಸಂಘಗಳ ಸಂಯೋಜಕರಾದ ಸುಜಾತಾ ಜಿ ನಾಯಕ್, ಶೈಲಜಾ ಪುದುಕೋಳಿ, ಚೇತನ, ಕಲ್ಪನಾ ಪ್ರಭು ಉಪಸ್ಥಿತರಿದ್ದರು. ಬಂಟ್ವಾಳ್ ಅಮೋಘ ಬಾಳಿಗಾ ವಂದಿಸಿ, ವೈಷ್ಣವಿ ಕಾಮತ್ ನಿರೂಪಿಸಿದರು. ಶ್ವೇತಾ ಕಾಮತ್, ಶ್ರಾವ್ಯಾ, ಮಾನಸ ರಾಷ್ಟ್ರೀಯ ಏಕತೆಯನ್ನು ಬಿಂಬಿಸುವ ಹಾಡು, ಹಾಗೂ ವರ್ಣ ಚಿತ್ರ ರಚಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ