ಉಡುಪಿ: ನೃತ್ಯನಿಕೇತನ ಕೊಡವೂರು ಸಂಸ್ಥೆಯ ವತಿಯಿಂದ ನೀಡುತ್ತಿರುವ ನಾಲ್ಕನೇ ವರುಷದ "ಕೃಷ್ಣಪ್ರೇಮ" ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಶನಿವಾರ ಸಂಜೆ ಕೊಡವೂರಿನ "ವಿಪ್ರಶ್ರೀ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಸಂದೇಶ್ ಜವಳಿಯವರು ವಹಿಸಿದ್ದರು. ಅತಿಥಿಗಳಾಗಿ ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ, ಕರ್ನಾಟಕ ಕರಾವಳಿ ನೃತ್ಯಕ ಲಾಪರಿಷತ್ತಿನ ಅಧ್ಯಕ್ಷರಾದ ಯು.ಕೆ. ಪ್ರವೀಣ್, ಮತ್ತು ಉಡುಪಿಯ ಹಿರಿಯ ಉದ್ಯಮಿಗಳು ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈಯವರು ಆಗಮಿಸಿದ್ದರು.
ಈ ಬಾರಿಯ ಪ್ರಶಸ್ತಿಯನ್ನು ನೃತ್ಯದ ಸಾಧಕರುಗಳಾದ ನೃತ್ಯ ಗುರುಗಳೂ ಮತ್ತು ನಿವೃತ್ತಶಾಲಾ ಶಿಕ್ಷಕರೂ ಆಗಿರುವ ಕಮಲಾಕ್ಷ ಆಚಾರ್, ಪ್ರಖ್ಯಾತ ನೃತ್ಯ ಸಂಗೀತ, ಮತ್ತು ಶಾಸ್ತ್ರೀಯ ಸಂಗೀತ ಕಲಾವಿದರಾಗಿರುವ ಬೆಂಗಳೂರಿನ ರಮೇಶ್ ಚಡಗ, ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಮತ್ತು ಪ್ರವೃತ್ತಿಯಲ್ಲಿ ನೃತ್ಯವರ್ಣಾಲಂಕಾರ ಕಲಾವಿದರಾಗಿರುವ ಕೆ. ಹರೀಶ್ ಕುಮಾರ್ ಗುಂಡಿಬೈಲು, ಖ್ಯಾತ ನೃತ್ಯವಾದ್ಯಸಂಗೀತ ಮತ್ತು ಶಾಸ್ತ್ರೀಯ ಸಂಗೀತದ ಪಿಟೀಲು ಕಲಾವಿದೆಯಾಗಿರುವ ಶ್ರೀಮತಿ ಶರ್ಮಿಳಾ ಕೆ.ರಾವ್, ನೃತ್ಯ ಹಾಗೂ ನಾಟಕ ರಂಗದ ಖ್ಯಾತ ಬೆಳಕಿನ ವಿನ್ಯಾಸ ಕಲಾವಿದರಾಗಿರುವ ರಾಜು ಮಣಿಪಾಲ್ ರವರು ಪಡೆದರು. ಇದರೊಂದಿಗೆ ಈ ವರುಷದಿಂದ ಕೃಷ್ಣಮೂರ್ತಿ ಉಪಾಧ್ಯಾಯ ಮತ್ತು ರಾವ್ ಇಬ್ಬರ ಸ್ಮರಣಾರ್ಥ ನೀಡುತ್ತಿರುವ ಯಕ್ಷಗಾನ ಕಲಿಯುವ ವಿದ್ಯಾರ್ಥಿಗೆ ಕೊಡುವ ವಿದ್ಯಾರ್ಥಿ ವೇತನವನ್ನು ಕೆ.ಜಿ. ದೀಪ್ತ ಕಿದಿಯೂರು ಪಡೆದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಪ್ರಾಯೋಜಕತ್ವದಲ್ಲಿ ನಡೆಯುವ ಈ ಕಾರ್ಯಕ್ರಮದ ಕೊನೆಯಲ್ಲಿ ನೃತ್ಯನಿಕೇತನ ಕೊಡವೂರು ಕಲಾವಿದರಿಂದ ರವೀಂದ್ರನಾಥ ಠಾಗೋರ್ ವಿರಚಿತ ಶ್ರೀಮತಿ ಸುಧಾ ಆಡುಕಳ ಕನ್ನಡ ಅನುವಾದದ ಡಾ|| ಶ್ರೀಪಾದ ಭಟ್ ನಿರ್ದೇಶನದ "ಚಿತ್ರಾ" ನೃತ್ಯ ನಾಟಕ ಪ್ರದರ್ಶನವಿತ್ತು.
ನೃತ್ಯನಿಕೇತನ ಕೊಡವೂರು ನಿರ್ದೇಶಕರು ವಿದ್ವಾನ್ ಸುಧೀರ್ ಕೊಡವೂರು ಮತ್ತು ವಿದುಷಿ ಮಾನಸಿಸುಧೀರ್ ಅವರು ಕಾರ್ಯಕ್ರಮ ಆಯೋಜಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ