ಧರ್ಮಸ್ಥಳ ಮೇಳದ ಬಯಲಾಟ ಪ್ರದರ್ಶನ ಆರಂಭ

Upayuktha
0

ಉಜಿರೆ: ಸುಮಾರು ಇನ್ನೂರು ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹರಿಕೆ ಬಯಲಾಟ ಪ್ರದರ್ಶನ ತಿರುಗಾಟ ಶನಿವಾರ ಆರಂಭಗೊಂಡಿದೆ.


ಈಗಾಗಲೇ ಕೆಲವು ದಿನಗಳಲ್ಲಿ ಧರ್ಮಸ್ಥಳದಲ್ಲಿ ಸೇವಾಕರ್ತರ ವತಿಯಿಂದ ಹರಿಕೆ ಬಯಲಾಟ ಪ್ರದರ್ಶನಗೊಂಡಿದ್ದು ಮುಂದೆ ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತಿ ದಿನ ಸಂಜೆ 7:00 ಗಂಟೆಯಿಂದ ರಾತ್ರಿ 12:00ರ ವರೆಗೆ ಕಾಲಮಿತಿಯ ಹರಿಕೆ ಪ್ರದರ್ಶನ ನಡೆಯಲಿದೆ.


2023ರ ಮೇ 23ರ ವರೆಗೆ ಬಯಲಾಟ ಪ್ರದರ್ಶನದ ಬಳಿಕ ಮೂರು ದಿನ ಧರ್ಮಸ್ಥಳದಲ್ಲಿ ಸೇವಾ ಬಯಲಾಟ ಪ್ರದರ್ಶನದೊಂದಿಗೆ ಬಯಲಾಟ ಪ್ರದರ್ಶನ ಮುಕ್ತಾಯಗೊಳ್ಳುತ್ತದೆ.


ಆಧ್ಯಾತ್ಮಿಕ ಮತ್ತುಧಾರ್ಮಿಕ ಸಂದೇಶವನ್ನು ನೀಡುವ ಪೌರಾಣಿಕ ಪ್ರಸಂಗಗಳನ್ನು ಮಾತ್ರ ಬಯಲಾಟದಲ್ಲಿ ಪ್ರದರ್ಶನ ನೀಡುವುದು ಮೇಳದ ವಿಶೇಷವಾಗಿದೆ.


ಮೇಳದ ತಿರುಗಾಟಕ್ಕೆ ಮಂಗಳವಾರ ಚಾಲನೆ ನೀಡಿ ಶುಭಹಾರೈಸಲಾಯಿತು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರಕುಮಾರ್ ಹಾಗೂ ಶ್ರೀಮತಿ ಸುಪ್ರಿಯಾ ಹೆಚ್. ಕುಮಾರ್‌ರವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top