ಮಂಗಳೂರು: ಭಾರತೀಯ ನೌಕಾದಳದ ಅಗ್ನಿವೀರ್ (ಸೀನಿಯರ್ ಸೆಕೆಂಡರಿ ರಿಕ್ರ್ಯೂಟ್‌ಮೆಂಟ್- ಬ್ಯಾಚ್ 01/2022) ಯೋಜನೆಯಡಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಧನುಷ್ ಕೆ ಅವರು ನೇಮಕಾತಿಗೆ ತಾತ್ಕಾಲಿಕವಾಗಿ ಆಯ್ಕೆಯಾಗಿದ್ದಾರೆ.
ಒರಿಸ್ಸಾ ರಾಜಧಾನಿ ಭುವನೇಶ್ವರದ ಸಮೀಪವಿರುವ ನೌಕಾಸೇನೆಯ ತರಬೇತಿ ಕೇಂದ್ರ ಐಎನ್‌ಎಸ್ ಚಿಲ್ಕಾದಲ್ಲಿ ಅವರು ತರಬೇತಿ ಪಡೆಯಲಿದ್ದಾರೆ. ಶೈಕ್ಷಣಿಕ, ಸೇವಾ ಸಂಬಂಧಿತ, ಕ್ರೀಡೆಯ ಜೊತೆಗೆ ಪೆರೇಡ್, ನೌಕಾಯಾನ, ಈಜು, ಕ್ರಾಸ್- ಕಂಟ್ರಿ, ಟ್ರೆಕ್ಕಿಂಗ್, ಫೈರಿಂಗ್ ಮೊದಲಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ. ಧನುಷ್, ವರ್ಕಾಡಿಯ (ಮಂಜೇಶ್ವರ) ಕೂಟತ್ತಾಜೆಯ, ತಿಮ್ಮಪ್ಪ ಗಟ್ಟಿ- ರೋಹಿಣಿ ದಂಪತಿಯ ಪುತ್ರ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ