ಸೂರ್ಯನಿಗೂ ಕಾಣಿಸದ ಅದೆಷ್ಟೋ ಸಾವಿರ ರೀತಿಯ ಪ್ರಕೃತಿ ಸಂಭ್ರಮದ ಗುಟ್ಟುಗಳನ್ನು ಗುರುತಿಸಿ ರಚಿಸುವ ಸಾಮರ್ಥ್ಯ ಒಬ್ಬ ಕಲೆಗಾರನ ಮೂಲಕ ಅದು ಹೊರಬರುತ್ತದೆ. ಕಲಾಪ್ರಿಯಾ ಎಂದು ಹೆಸರೇ ಸೂಚಿಸುವಂತೆ ಕಲೆಗಳ ಬಗ್ಗೆ ಅಪಾರ ಪ್ರೀತಿ, ಗೌರವವನ್ನು ಹೊಂದಿರುವವರು ಪ್ರಿಯಾದರ್ಶನ್.
ಮೂಲತಃ ಕಾರವಾರ ಜಿಲ್ಲೆಯ, ಸಿರ್ಸಿ ತಾಲ್ಲೂಕಿನ, ಮಧುರವಳ್ಳಿ ಗ್ರಾಮದ ನಿವಾಸಿಗಳಾದ ಚಾಮರಾಜ.ಜಿ ನಾಯ್ಕ್ ಹಾಗೂ ಸರೋಜ.ಸಿ ನಾಯ್ಕ್ ದಂಪತಿಗಳ ಪುತ್ರ ಪ್ರಿಯಾದರ್ಶನ್. ತನ್ನ ಪ್ರಾಥಮಿಕ ಶಿಕ್ಷಣವನ್ನು ಹಿರಿಯ ಪ್ರಾಥಮಿಕ ಶಾಲೆ ಮಧುರವಳ್ಳಿ, ಪ್ರೌಢ ಶಿಕ್ಷಣವನ್ನು ಬನವಾಸಿಯ ಜಯಂತಿ ಪ್ರೌಢ ಶಾಲೆಯಲ್ಲಿ ಪಡೆದು ಪದವಿಪೂರ್ವ ಶಿಕ್ಷಣವನ್ನು ಸಿರ್ಸಿಯ ಪ್ರೋಗ್ರೆಸೀವ್ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ನಂತರ ಇವರು ಸಾಗರದ ವಿದ್ಯಾಭ್ಯಾಸ ಶಿಲ್ಪಕಲಾ ಗುರುಕುಲದಲ್ಲಿ, ಉತ್ತರಪ್ರದೇಶದ ನಿವಾಸಿಯಾಗಿರುವ ಕರ್ನಾಟಕದಲ್ಲೇ ನಂಬರ್ ಒನ್ ಎಂದೆನಿಸಿಕೊಂಡಿರುವ, ಕಲಾಶಿಲ್ಪ ಗುರುಗಳಾದ ವಿಪಿನ್ ಸಿಂಗ್ ಇವರ ಮಾರ್ಗದರ್ಶನದ ಮೂಲಕ ಎರಡು ವರ್ಷಗಳ ಶಿಲ್ಪಕಲಾ ತರಬೇತಿಯನ್ನು ಪಡೆದು ಇದೀಗ ಹಲವು ವಿವಿಧ ರೀತಿಯ 50ಕ್ಕಿಂತಲೂ ಹೆಚ್ಚು ಕಲ್ಲಿನ ಮೂರ್ತಿ ರಚನೆಯನ್ನು ಅದ್ಬುತವಾಗಿ, ಸುಂದರವಾಗಿ ಕೆತ್ತನೆ ಮಾಡಿ ಶಿಲ್ಪಕಲಾಕೃತಿಗಳನ್ನು ರೂಪಿಸಿದ ಸಾಮರ್ಥ್ಯ ಇವರದಾಗಿದೆ. ಪೆನ್ಸಿಲ್ ಸ್ಕೆಚ್, ಪೋಟ್ರೈಟ್, ಡಿಜಿಟಲ್ ಆರ್ಟ್, ಕಲ್ಲಿನ ಮೂರ್ತಿ, ಕ್ರಾಫ್ಟ್ ಮುಂತಾದ ಹಲವು ರೀತಿಯ 500ಕ್ಕಿಂತಲೂ ಹೆಚ್ಚು ಚಿತ್ರಕಲೆಗಳನ್ನು ರಚಿಸಿದ್ದಾರೆ.
-ಶಿಲ್ಪಾ ಜಯಾನಂದ್
ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು, ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ