ಮಹಿಳಾ ತಂಡ ಸತತ 17 ಬಾರಿ ಹಾಗೂ ಪುರುಷರ ತಂಡ ಸತತ 20 ಬಾರಿ ಗೆಲುವಿನ ಬೇಟೆ
ಮೂಡುಬಿದಿರೆ: ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗ ಹಾಗೂ ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಮೆಮೋರಿಯಲ್ ನ್ಯಾಷನಲ್ ಗವರ್ನಮೆಂಟ್ ಫಸ್ಟ್ ಗ್ರೇಡ್ ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಪುರುಷ ಹಾಗೂ ಮಹಿಳೆಯರ ಗುಡ್ಡಗಾಡು ಓಟದ ಎರಡು ವಿಭಾಗ ಹಾಗೂ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.
ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ಮಹಿಳಾ ತಂಡ ಸತತ 17 ಬಾರಿ ಹಾಗೂ ಪುರುಷರ ತಂಡ ಸತತ 20ನೇ ವರ್ಷವೂ ಚಾಂಪಿಯನ್ನಾಗಿ ಪ್ರಾಬಲ್ಯ ಮೆರೆಯಿತು.
ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ-ಹರೀಶ್, ದ್ವಿತೀಯ ಸ್ಥಾನ ಉಪೇಂದ್ರ ಬಲಿಯಾನ್, ತೃತೀಯ ಸ್ಥಾನ - ಅನಿಲ್ ಕುಮಾರ್, ಚತುರ್ಥ ಸ್ಥಾನ-ಆಸಿಫ್‌ಖಾನ್, ಆರನೇ ಸ್ಥಾನ - ರೋಹಿತ್ ಯಾದವ್ ಪಡೆದುಕೊಂಡರು.
ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ-ಬಸಂತಿ ಕುಮಾರಿ, ದ್ವಿತೀಯ ಸ್ಥಾನ-ಪೂನಂ ಸೋನು, ತೃತೀಯ ಸ್ಥಾನ-ಸೋನಿಯಾ, ಚತುರ್ಥ ಸ್ಥಾನ-ಚೈತ್ರ ದೇವಾಡಿಗ, ಐದನೇ ಸ್ಥಾನ ನಿರ್ಮಾ ಟಾಕೂರ್, 6ನೇ ಸ್ಥಾನ-ವೈಷ್ಣವಿ ಪಡೆದುಕೊಂಡರು.
ಅಂತರ್ ಕಾಲೇಜು ಮಟ್ಟದಲ್ಲಿ ಮೊದಲ ಆರು ಸ್ಥಾನ ಪಡೆದ ಕ್ರೀಡಾಪಟುಗಳು ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಅಂತರ್ ವಿವಿ ಗುಡ್ಡಗಾಡು ಓಟದಲ್ಲಿ ಪಾಲ್ಗೊಳ್ಳಲು ಆರ್ಹತೆ ಪಡೆದು ಕೊಂಡರು. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ