'ಇನ್ಸೆಫ್‌ ರೀಜನಲ್ ಫೇರ್'ಗೆ ಸುದಾನದ ವಿದ್ಯಾರ್ಥಿಗಳು ಆಯ್ಕೆ

Upayuktha
0

ಪುತ್ತೂರು: 2022 - 23ನೇ ಸಾಲಿನ 'ಇನ್ಸೆಫ್‌ ರೀಜನಲ್ ಫೇರ್' ( ಮೈಕ್ರೋಫೇರ್) ಸ್ಪರ್ಧೆಗೆ ಸುದಾನ ಶಾಲೆಯ ಎರಡು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.


ಏಳನೇ ತರಗತಿಯ ಮಿಥುನ್‌ ಪಿ.ಪಿ (ಶ್ರೀ. ಪ್ರಮೋದ್‌ ಪಿ.ಏ ಮತ್ತು ಶ್ರೀಮತಿ. ಶ್ರೀಪ್ರಿಯ ಕೆ.ಆರ್‌ ರವರ ಪುತ್ರ) ಪ್ರಾಜೆಕ್ಟ್: ಸ್ಮಾರ್ಟ್ ವಾಟರ್ ಸೇವರ್ ಹಾಗೂ ಅದ್ವಿಜ್ ಸಜೇಶ್ (ಶ್ರೀ. ಸಜೇಶ್‌ ಆನಂದ್ ಮತ್ತು ಶ್ರೀಮತಿ. ರಜಿತ ಸಜೇಶ್‌ರವರ ಪುತ್ರ) ಪ್ರಾಜೆಕ್ಟ್: ಫೋರ್‌ಟೇಬಲ್ ಮಲ್ಟಿ ಕ್ಲೀನಿಂಗ್‌ ಟೂಲ್ ಮಾಡಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.


ವಿಭಾಗೀಯ ಮಟ್ಟದ ಸ್ಪರ್ಧೆಯು ದಿನಾಂಕ 05.11.2022 ರಂದು ನಡೆಯಲಿರುವುದು. ಈ ಎರಡೂ ಮಾದರಿಗಳಿಗೆ ಶಾಲಾ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ. ಶ್ಯಾಮಲ ಬಂಗೇರ ಹಾಗೂ ಶ್ರೀಮತಿ. ನಿರ್ಮಲ ಡಿಸೋಜರವರು ಮಾರ್ಗದರ್ಶನ ನೀಡಿದ್ದಾರೆಂದು ಶಾಲಾ ಮುಖ್ಯೋಪಧ್ಯಾಯಿನಿ ಶ್ರೀಮತಿ. ಶೋಭನಾಗರಾಜ್‌ರವರು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
To Top