ಬೆಂಗಳೂರು: ಕೋಣಕುಂಟೆ ಚುಂಚಘಟ್ಟ ಮುಖ್ಯರಸ್ತೆಯಲ್ಲಿರುವ ಶ್ರೀನಿಧಿ ಶ್ರೀನಿವಾಸ ದೇವಸ್ಥಾನದಲ್ಲಿ ತಿರುಮಲಾಧೀಶ ಶ್ರೀ ಶ್ರೀನಿಧಿ ಶ್ರೀನಿವಾಸ, ಶ್ರೀ ಭೂವರಾಹ, ಶ್ರೀ ಹಯಗ್ರೀವ, ಶ್ರೀ ಮಹಾಲಕ್ಷ್ಮೀ ಹಾಗೂ 18 ಅಡಿ ಎತ್ತರದ ಭವ್ಯವಾದ ಶ್ರೀ ಮುಖ್ಯಪ್ರಾಣ ದೇವರ (ಆಂಜನೇಯ) ದಿವ್ಯ ಸನ್ನಿಧಾನದಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವದ ಶುಭ ಸಂದರ್ಭದಲ್ಲಿ ಭಕ್ತ-ವಿದ್ವಜ್ಜನರ ಸಮಕ್ಷಮದಲ್ಲಿ ಶ್ರೀ ಶ್ರೀನಿಧಿ ಶ್ರೀನಿವಾಸ ದೇವಸ್ಥಾನದ ವತಿಯಿಂದ ಗಾಯನ ಪ್ರವೀಣ ವಿದ್ವಾನ್ ಆರ್.ಕೆ.ಪ್ರಸನ್ನಕುಮಾರ್ ರವರಿಗೆ ‘ಶ್ರೀ ಶ್ರೀನಿಧಿ ಸಂಗೀತ ಕಲಾನಿಧಿ’ ಎಂಬ ಬಿರುದು ನೀಡಿ ಗೌರವಿಸುವ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಮುಖ್ಯ ಅಥಿಗಳಾಗಿ ಕೋಣನಕುಂಟೆ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ವೇದಮೂರ್ತಿ || ಪಿ.ಎನ್.ಫಣಿಕುಮಾರ್ ಆಗಮಿಸಿದ್ದರು, ಸಂಸ್ಕøತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅಭಿನಂದನಾ ಪತ್ರ ವಾಚಿಸಿದರು. ಹಿರಿಯ ಹರಿದಾಸ ಸಾಹಿತ್ಯ ಸಂಶೋಧಕ ಡಾ.ಅನಂತಪದ್ಮನಾಭ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಎಂದು ದೇವಸ್ಥಾನದ ಧರ್ಮದರ್ಶಿ ಡಾ.ಕೆ.ಎಸ್.ಸಮೀರ ಸಿಂಹ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ