ಉಪ್ಪಳ : ಕೇರಳ ಸರಕಾರದ KITE ಸಂಸ್ಥೆಯು ಕೇರಳ ರಾಜ್ಯ ಮಟ್ಟದಲ್ಲಿ ಪ್ರಾಥಮಿಕ ಶಾಲೆಯಿಂದ ಹೈಯರ್ ಸೆಂಕೆಡರಿ ಸೆಕಂಡರಿ ಶಾಲೆಗಳನ್ನು ಒಳಗೊಂಡ ‘”ಸ್ಕೂಲ್ ವಿಕ್ಕಿ “ ( SCHOOL WIKI UPDATION )ನಲ್ಲಿ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಗೆ ಪ್ರಶಂಸಾರ್ಹ ಸಾಧನೆಗೈದಿದೆ. ಈ ಬಗ್ಗೆ ಕೇರಳ ಸರಕಾರ ನೀಡಿದ ಪ್ರಶಂಸಾ ಪತ್ರವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ . ಅವರು ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅವರಿಗೆ ನೀಡಿ ಗೌರವಿಸಿದರು. ಮುಳಿಂಜ ಶಾಲೆ ಮಂಜೇಶ್ವರ ಉಪ ಜಿಲ್ಲಾ ಮಟ್ಟದಲ್ಲಿ ಈ ಪತ್ರ ಲಭಿಸಿದ ಎರಡನೇ ಶಾಲೆಯಾಗಿದೆ.
ಕೇರಳ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ “ ರಾಜ್ಯದ ಸರ್ವ ಶಾಲೆಗಳ ಅಂತರ್ಜಾಲ ಮಾಹಿತಿ ಕೋಶವೇ ಸ್ಕೂಲ್ ವಿಕಿ “. ಇದರಲ್ಲಿ ಶಾಲೆಗೆ ಖ್ಯಾತಿ ತಂದಿತ್ತ ಸಾಧಕ ಪೂರ್ವ ವಿದ್ಯಾರ್ಥಿಗಳು, ನಿವೃತ್ತ ಮುಖ್ಯ ಶಿಕ್ಞಕರು, ಪ್ರಸಕ್ತ ವರ್ಷದ ಶಾಲಾ ಚಟುವಟಿಕೆಗಳು , ಶಾಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮಾಹಿತಿಗಳನ್ನು ಒಳಗೊಂಡಿದೆ.