35ನೇ ಅಖಿಲ ಭಾರತ ಅಂಚೆ ವಾಲಿಬಾಲ್ ಪಂದ್ಯಾಟ: ಟ್ರೋಫಿ ಗೆದ್ದ ಕರ್ನಾಟಕ

Upayuktha
0

ಬೆಂಗಳೂರು: ನಾಲ್ಕು ದಿನಗಳ 35ನೇ ಅಖಿಲ ಭಾರತ ಅಂಚೆ ವಾಲಿಬಾಲ್ ಪಂದ್ಯಾವಳಿ ಮುಕ್ತಾಯಗೊಂಡಿದ್ದು, ಆತಿಥೇಯ ಕರ್ನಾಟಕ ಟ್ರೋಫಿ ಗೆದ್ದು ವಿಜಯದ ನಗೆ ಬೀರಿತು.

ದಿನಾಂಕ 27.09.2022 ರಂದು ಆರಂಭಗೊಂಡಿದ್ದು ಶುಕ್ರವಾರ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆದವು. ಮೊದಲ ಸೆಮಿಫೈನಲ್ ಪಂದ್ಯವು ಅತಿಥೇಯ ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ತಂಡಗಳ ನಡುವೆ ನಡೆದಿದ್ದು ಕರ್ನಾಟಕ ತಂಡವು 3-0 (25-16, 25-17, 25-18) ಅಂತರದಿಂದ ಜಯಗಳಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು.


ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹಿಮಾಚಲ ಪ್ರದೇಶ ಮತ್ತು ಕೇರಳ ತಂಡಗಳು ಮುಖಮುಖಿಯಾಗಿದ್ದು ಹಿಮಾಚಲ ಪ್ರದೇಶ ತಂಡವು 3-1 (25-21, 18-25,25-23,25-18) ಸೆಟ್ ಗಳ ಅಂತರದಲ್ಲಿ ಜಯಗಳಿಸಿ ಫೈನಲ್ ಸುತ್ತನ್ನು ಪ್ರವೇಶಿಸಿದ ಎರಡನೇ ತಂಡವಾಗಿ ಹೊರ ಹೊಮ್ಮಿತು. 


ಅತಿಥೇಯ ಕರ್ನಾಟಕ ಮತ್ತು ಕಳೆದ ಬಾರಿಯ ಚಾಂಪಿಯನ್ ಹಿಮಾಚಲ ಪ್ರದೇಶ ತಂಡಗಳು ಫೈನಲ್ ಪಂದ್ಯದಲ್ಲಿ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲು ಸೆಣಸಿದವು. ಕರ್ನಾಟಕ ತಂಡವು 3-0 (25-20, 25-21, 25-15) ಅಂತರದಿಂದ ಹಿಮಾಚಲ ಪ್ರದೇಶ ತಂಡದ ಎದುರು ಗೆಲುವು ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಕರ್ನಾಟಕ ತಂಡದ ಆಟಗಾರರ ಪಟ್ಟಿ ಇಂತಿದೆ: ಕಾರ್ತಿಕ್ ಎ (ನಾಯಕ), ಮಂಜುನಾಥ, ಸೂರಜ್, ಪವನ್ ಪ್ರಭು, ಗಣೇಶ ಕೆ, ಆಂಟೋನಿ, ಸತೀಶ್ ಎ, ಮನೋಹರ್ ಬಿ ಎಸ್, ಪವನ್ ಕೆ, ವಿನಾಯಕ ರೋಖಡೆ, ರೈಸನ್ ಬೆನೆಟ್ ರೆಬೆಲ್ಲೋ ಮತ್ತು ಕಾರ್ತಿಕ್ ಎಸ್ ಎ.

ಇಂದಿನ ಪಂದ್ಯಗಳ ಫಲಿತಾಂಶ ಈ ಕೆಳಗಿನಂತಿದೆ. 

ಪಂದ್ಯ

ತಂಡ1

ತಂಡ2

ವಿಜೇತ ತಂಡ

ಗೆಲುವಿನ ಅಂತರ

ಸ್ಕೋರ್

ಪಂದ್ಯದ ಅವಧಿ

ಸೆಮಿಫೈನಲ್ 1

ಕರ್ನಾಟಕ

ಪಶ್ಚಿಮಬಂಗಾಳ

ಕರ್ನಾಟಕ

3-0

25-16, 25-17, 25-18

 62 ನಿಮಿಷಗಳು

ಸೆಮಿಫೈನಲ್ 2

ಹಿಮಾಚಲ ಪ್ರದೇಶ

ಕೇರಳ

ಹಿಮಾಚಲ ಪ್ರದೇಶ

3-1

25-21, 18-25, 25-23, 25-18

 96 ನಿಮಿಷಗಳು

ಮೂರನೇ ಸ್ಥಾನದ ಪಂದ್ಯ

ಪಶ್ಚಿಮಬಂಗಾಳ

ಕೇರಳ

ಪಶ್ಚಿಮಬಂಗಾಳ

2-0

25-16, 25-16.

40 ನಿಮಿಷಗಳು

ಫೈನಲ್

ಕರ್ನಾಟಕ

ಹಿಮಾಚಲ ಪ್ರದೇಶ

ಕರ್ನಾಟಕ

3-0

25-20, 25-21, 25-15.

70 ನಿಮಿಷಗಳು

 

ಸಂಜೆ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಡಾ. ಶಾಲಿನಿ ರಜನೀಶ್, ಐ.ಎ.ಎಸ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ರವರು ಆಗಮಿಸಿದ್ದರು, 


ಗೌರವಾನ್ವಿತ ಅತಿಥಿಗಳಾದ ಶ್ರೀಯುತ ಎಂ.ಪಿ.ಗಣೇಶ್, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತರು, ಮಾಜಿ ಭಾರತೀಯ ವೃತ್ತಿಪರ ಫೀಲ್ಡ್ ಹಾಕಿ ಆಟಗಾರ ಇವರು ಸಭೆಯನ್ನು ಉದ್ದೇಶಿಸಿ ಭಾಗವಹಿಸಿದ ಎಲ್ಲಾ ತಂಡಗಳನ್ನು ಅಭಿನಂದಿಸಿ, ಕ್ರೀಡೆಯಲ್ಲಿ ಮುಂದುವರೆಯಲು ಪ್ರೋತ್ಸಾಹಿಸಿದರು. ಸಭೆಯಲ್ಲಿ ನೆರೆದಿದ್ದ ಪೋಷಕರು ಹಾಗೂ ಮಕ್ಕಳನ್ನು ಉದ್ದೇಶಿಸಿ ಸತ್ಪ್ರಜೆಗಳಾಗಬೇಕೆಂದು ಕಿವಿ ಮಾತುಗಳನ್ನು ಹೇಳಿದರು.     


ಮತ್ತೋರ್ವ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ನಾಗರಾಜ ಹೆಗಡೆ, ಏಕಲವ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಅಂತಾರಾಷ್ಟ್ರೀಯ ವಾಲೀಬಾಲ್ ಆಟಗಾರ ಇವರು ಮಾತನಾಡಿ 35 ನೇ ವಾಲಿಬಾಲ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ ಕರ್ನಾಟಕ ಅಂಚೆ ವೃತ್ತವನ್ನು ಅಭಿನಂದಿಸಿದರು ಹಾಗೂ ವಿವಿಧ ಕ್ಷೇತ್ರಗಳ ಕ್ರೀಡಾಳುಗಳನ್ನು, ವಿಶೇಷವಾಗಿ ಅತ್ಯುತ್ತಮ ವಾಲಿಬಾಲ್ ಆಟಗಾರರನ್ನು ಸ್ಪೋರ್ಟ್ಸ್ ಕೋಟಾದಡಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಂಡಿರುವುದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು. ದೈನಂದಿನ ಹಾಗೂ ವೃತ್ತಿ ಜೀವನದಲ್ಲಿ ದೈಹಿಕ ಕ್ಷಮತೆಯನ್ನು ಕಾಪಡಿಕೊಳ್ಳುವಲ್ಲಿ ಕ್ರೀಡೆಯ  ಮಹತ್ವದ ಬಗ್ಗೆ ತಿಳಿಸಿದರು.


ಶ್ರೀ ಎಸ್ ರಾಜೇಂದ್ರ ಕುಮಾರ್, ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್, ಕರ್ನಾಟಕ ಅಂಚೆ ವೃತ್ತ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಧ್ಯಕ್ಷೀಯ ಭಾಷಣದಲ್ಲಿ ಶ್ರೀಯುತರು ತಂಡಗಳನ್ನು ಅಭಿನಂದಿಸಿದರು . ನೆರೆದಿದ್ದ ಶಾಲಾ ಮಕ್ಕಳು ಹಾಗೂ ಪೋಷಕರನ್ನು ಉದ್ದೇಶಿಸಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಕಳಕಳಿಯಿಂದ ವಿನಂತಿಸಿದರು. ಭಾರತ ಸರಕಾರ ಕರೆ ನೀಡಿರುವ ಫಿಟ್ ನೆಸ್ ಇಂಡಿಯಾ ಅಭಿಯಾನದಡಿ ಇಲಾಖೆಯು 02.10. 2022 ರಂದು ನಗರದ ಕಬ್ಬನ್ ಉದ್ಯಾನದಲ್ಲಿ ನಡೆಸಲು ಉದ್ದೇಶಿಸಿರುವ plog run ಕುರಿತಾಗಿ ಉಲ್ಲೇಖಿಸಿದರು. ಅಂತೆಯೆ ಸಿಬ್ಬಂದಿ ವರ್ಗದವರಿಗೆ ದೈಹಿಕ ಕ್ಷಮತೆಗೆ ಪ್ರಾಧಾನ್ಯತೆ ನೀಡುವಂತೆ ಕರೆ ನೀಡಿದರು. 


ಅತಿಥಿಗಳು ಹಾಗೂ ಸಮಾರಂಭದ ಅಧ್ಯಕ್ಷರು ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಿದರು. ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರರಿಗೂ ಪ್ರಶಸ್ತಿ ನೀಡಲಾಯಿತು. ಬಹುಮಾನಿತರ ಪಟ್ಟಿ ಇಂತಿದೆ :

  

ಕ್ರಮ ಸಂಖ್ಯೆ

ಪ್ರಶಸ್ತಿಯ  ವಿವರ

ವಿಜೇತರು

1

ವಿಜೇತ ತಂಡ

ಕರ್ನಾಟಕ

2

ರನ್ನರ್ ಅಪ್ ತಂಡ

ಹಿಮಾಚಲ ಪ್ರದೇಶ

3

ಮೂರನೆಯ ಸ್ಥಾನ

ಪಶ್ಚಿಮ ಬಂಗಾಳ

4

ಅತ್ಯುತ್ತಮ ಅಟ್ಯಾಕರ್

ಶ್ರೀ ರೈಸನ್ ಬೆನೆಟ್ ರೆಬೆಲ್ಲೋ , ಕರ್ನಾಟಕ    

5

ಅತ್ಯುತ್ತಮ ಬ್ಲಾಕರ್

ಶ್ರೀ ಎ ಕಾರ್ತಿಕ್, ಕರ್ನಾಟಕ.   

6

ಅತ್ಯುತ್ತಮ ಲಿಬೆರೊ

ಶ್ರೀ ಧ್ರುಬ್ ಜ್ಯೋತಿ ಬಿಸ್ವಾಸ್, ಪಶ್ಚಿಮ ಬಂಗಾಳ   

7

ಅತ್ಯುತ್ತಮ ಸೆಟ್ಟರ್

ಶ್ರೀ ಆದರ್ಶ್ ವರ್ಮಾ , ಹಿಮಾಚಲ ಪ್ರದೇಶ. 

   

ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಮುಖ್ಯ ರೆಫ್ರೀ ಶ್ರೀ ಕೆ ವೆಂಕಟೇಶ್ ಹಾಗೂ ಅವರ ತಂಡದ ಎಲ್ಲ ಮ್ಯಾಚ್ ರೆಫ್ರೀಗಳು, ಅಂಪೈರ್ ಗಳು ಹಾಗೂ ಬಾಲ್ ಹುಡುಗರಿಗೆ ಅಂಚೆ ಇಲಾಖೆ ವತಿಯಿಂದ ಗೌರವಾನ್ವಿತ ಅತಿಥಿಗಳಿಂದ ನೆನಪಿನ ಕಾಣಿಕೆಗಳನ್ನು ಕೊಡಮಾಡಲಾಯಿತು.      


ಫೈನಲ್ ಪಂದ್ಯದ ನಂತರ ಗಣ್ಯರನ್ನು ವೇದಿಕೆಗೆ ಆಹ್ವಾನಿಸುವುದರ ಮೂಲಕ ಶುಭಾರಂಭಗೊಂಡ ಸಮಾರೋಪ ಸಮಾರಂಭದಲ್ಲಿ ಡಾ. ಎನ್. ವಿನೋದ್ ಕುಮಾರ್, ಐಪಿಒಎಸ್, ಪೋಸ್ಟ್ ಮಾಸ್ಟರ್ ಜನರಲ್, ಉತ್ತರ ಕರ್ನಾಟಕ ವಲಯ, ರವರು ಸ್ವಾಗತ ಬಯಸಿದರು. ಶ್ರೀ ಮಂಜೇಶ್, ಸಹಾಯಕ ನಿರ್ದೇಶಕರು (ವೆಲ್ಫೇರ್), ಕರ್ನಾಟಕ ವೃತ್ತ ರವರು ಕಾರ್ಯದರ್ಶಿಗಳ ವರದಿಯನ್ನು ಪ್ರಸ್ತುತ ಪಡಿಸಿದರು. ಶ್ರೀ ಸಂದೇಶ್ ಮಹದೇವಪ್ಪ ಎಪಿಎಂಜಿ (ಸಿಬ್ಬಂದಿ & ಜಾಗರೂಕತೆ) ರವರು ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ, ಪಂದ್ಯಾವಳಿಯ ಕುರಿತಾದ ಸುದ್ದಿಗಳನ್ನು ಪ್ರಕಟಣೆ ಮಾಡಿದ ಮುದ್ರಣ ಹಾಗೂ ಇಲೆಕ್ಟ್ರಾನಿಕ್ ಮಧ್ಯಮದವರಿಗೆ ವಂದನಾರ್ಪಣೆ ಮಾಡಿದರು.


ಶ್ರೀಮತಿ ಸಪ್ನ ಪ್ರಮೋದ್, ಜನರಲ್ ಮ್ಯಾನೇಜರ್, ಅಂಚೆ ಲೆಕ್ಖ ವಿಭಾಗ, ಕರ್ನಾಟಕ ವೃತ್ತ, ಶ್ರೀ ಎಲ್ ಕೆ ಡಾಶ್, ಪೋಸ್ಟ್ ಮಾಸ್ಟರ್ ಜನರಲ್, ಬೆಂಗಳೂರು ಮುಖ್ಯಾಲಯ ಕ್ಷೇತ್ರ ಮತ್ತು ಶ್ರೀಮತಿ ಕೈಯ್ಯ ಅರೋರ, ನಿರ್ದೇಶಕರು ಅಂಚೆ ಸೇವೆ ಬೆಂಗಳೂರು ಮುಖ್ಯಾಲಯ ಕ್ಷೇತ್ರ ಇವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಶ್ರೀಮತಿ ಸುಷ್ಮ ಹಾಗೂ ಶ್ರೀ ಬಿ ಆರ್ ಹೇಮಂತ್ ಕುಮಾರ್ ರವರು ಸಮಾರೋಪ ಸಮಾರಂಭದ ನಿರೂಪಣೆ ಮಾಡಿದರು. ಕರ್ನಾಟಕ ಅಂಚೆ ವೃತ್ತದ ಹಲವು ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.  


ಅತಿಥಿಗಳು ಹಾಗೂ ಅಧ್ಯಕ್ಷರು ಪಂದ್ಯಾವಳಿಯ ಮುಕ್ತಾಯವನ್ನು ವಿಧ್ಯುಕ್ತವಾಗಿ ಘೋಷಿಸಿದರು. ನಂತರದಲ್ಲಿ ಪಂದ್ಯಾವಳಿಯ ಧ್ವಜಾವರೋಹಣ ಹಾಗೂ ರಾಷ್ಟ್ರಗೀತೆಯೊಂದಿಗೆ 35 ನೇ ಅಖಿಲ ಭಾರತ ಅಂಚೆ ವಾಲಿಬಾಲ್ ಪಂದ್ಯಾವಳಿಯು ಸಂಪನ್ನವಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top