ಜನಸಾಗರದ ನಡುವೆ ಕುಡ್ಲದ ಪಿಲಿಪರ್ಬದ ಮೊದಲ ಆವೃತ್ತಿಗೆ ವಿಧ್ಯುಕ್ತ ತೆರೆ

Upayuktha
0

ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನದಲ್ಲಿ, ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಟಾನ ಆಯೋಜಿಸಿದ ಕುಡ್ಲದ ಪಿಲಿಪರ್ಬ 2022 ಭಾನುವಾರ ರಾತ್ರಿ ಅದ್ದೂರಿಯಾಗಿ ಸಮಾಪನಗೊಂಡಿತು. ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು, ಪೊಳಲಿ ಟೈಗರ್ಸ್ ಪ್ರಥಮ ಸ್ಥಾನದೊಂದಿಗೆ ಆಕರ್ಷಕ ಟ್ರೋಫಿಯನ್ನು ಪಡೆದು 2022 ಪಿಲಿಪರ್ಬದ ವಿಜೇತ ತಂಡವಾಗಿ ಮೂಡಿಬಂದಿದೆ. 


ಪ್ರಥಮ ರನ್ನರ್ ಅಪ್ ತಂಡವಾಗಿ ಕಾಳಿಚರಣ್ ಫ್ರೆಂಡ್ಸ್ (ರಿ) ನೇಶನಲ್ ಬೋಳೂರು, 

ಎರಡನೇ ರನ್ನರ್ ಅಪ್ ಆಗಿ ನಂದಿಗುಡ್ಡೆ ಫ್ರೆಂಡ್ಸ್ ಹುಲಿ, ಬಾಬುಗುಡ್ಡೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿವೆ. ವಿಶೇಷ ಪ್ರಶಸ್ತಿಗಳನ್ನು ಕೂಡ ನೀಡಲಾಗಿದೆ.


*ಪರ್ಬದ ಪಿಲಿ ಪ್ರಶಸ್ತಿಯನ್ನು ತುಳುವೆರ್ ಕುಡ್ಲ ಶ್ರೀರಾಮ ಕ್ರಿಕೆಟರರ್ಸ್, 

*ತಾಸೆ ಕ್ಯಾಟಗರಿಯಲ್ಲಿ ಕೊಡಿಯಾಲ್ ಬೈಲ್ ಫ್ರೆಂಡ್ಸ್, 

*ಮರಿಪಿಲಿ ಪ್ರಶಸ್ತಿಯನ್ನು ಮುಳಿಹಿತ್ಲು ಫ್ರೆಂಡ್ಸ್, 

*ಕಪ್ಪು ಪಿಲಿ ಪ್ರಶಸ್ತಿಯನ್ನು ಕೋಡಿಕಲ್ ವಿಶಾಲ್ ಟೈಗರ್ಸ್, 

*ಧರಣಿ ಮಂಡಲ ಪ್ರಶಸ್ತಿಯನ್ನು ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು, ಪೊಳಲಿ ಟೈಗರ್ಸ್, 

*ವಿಶೇಷ ಬಣ್ಣಗಾರಿಕೆಗಾಗಿ ಕಾಳಿಚರಣ್ ಫ್ರೆಂಡ್ಸ್ (ರಿ) ನೇಶನಲ್ ಬೋಳೂರು, 


*ಮುಡಿ ಪ್ರಶಸ್ತಿಯನ್ನು ನಂದಿಗುಡ್ಡೆ ಫ್ರೆಂಡ್ಸ್ ಹುಲಿ ಬಾಬುಗುಡ್ಡೆ ಪುರಸ್ಕೃತರಾಗುವ ಮೂಲಕ ವಿಶೇಷ ಬಹುಮಾನಗಳನ್ನು ಗೆದ್ದುಕೊಂಡವು. *ವಿಶೇಷವಾಗಿ ಶಿಸ್ತಿನ ತಂಡ ಪ್ರಶಸ್ತಿಯನ್ನು ಜೈ ಶಾರದಾಂಬ, ಪೇಜಾವರ ಪೋರ್ಕೋಡಿ ತಂಡಕ್ಕೆ ನೀಡಿ ಗೌರವಿಸಲಾಯಿತು. 


ತೀರ್ಪುಗಾರರಾಗಿ ಬಜಿಲಕೇರಿ ಕಮಲಾಕ್ಷ, ಕೆ.ಕೆ ಪೇಜಾವರ, ವೇಂಕಟೇಶ್ ಭಟ್, ನವೀನ್ ಕುಮಾರ್ ಉಪಸ್ಥಿತರಿದ್ದರು. ವಿಶ್ಲೇಷಣಾಕಾರರಾಗಿ ಕದ್ರಿ ನವನೀತ್ ಶೆಟ್ಟಿ, ಮನೋಹರ್ ಪ್ರಸಾದ್ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. 


ಶಾಸಕ ವೇದವ್ಯಾಸ ಕಾಮತ್, ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ ಪಾಂಡೇಶ್ವರ ಪ್ರಶಸ್ತಿಗಳನ್ನು ವಿತರಿಸಿದರು. ಸಂಘಟಕ ಮಂಗಲ್ಪಾಡಿ ನರೇಶ್ ಶೆಣೈ, ಉದಯ್ ಪೂಜಾರಿ ಬಳ್ಳಾಲ್ ಬಾಗ್, ಲಲಿತ್ ಮೆಂಡನ್, ಚೇತನ್ ಕಾಮತ್, ನರೇಶ್ ಪ್ರಭು, ಸೂರಜ್ ಕಾಮತ್ ಕೊಂಚಾಡಿ, ಕಿರಣ್ ಶೆಣೈ, ಮನೋಹರ್ ಶೆಟ್ಟಿ, ಜಗದೀಶ್ ಕದ್ರಿ, ಶಾನು ಕೋಡಿಕೆರೆ, ವಿಜಯ ಕುಮಾರ್ ಶೆಟ್ಟಿ ಹಾಗೂ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು. ಮಧುರಾಜ್, ಸೌಮ್ಯ ಕೋಟ್ಯಾನ್, ಶರ್ಮಿಳಾ ಅಮೀನ್, ಅಭಿಷೇಕ್ ಶೆಟ್ಟಿ, ಮಧು ಮೈಲಂಕೋಡಿ ನಿರೂಪಿಸಿದರು. 


ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸುನೀಲ್ ಕುಮಾರ್, ಶಾಸಕರುಗಳಾದ ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ, ಶ್ರೀಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಸಾಯಿರಾಂ, ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶರಣ್ ಪಂಪ್ ವೆಲ್, ಸಿನೆಮಾ ತಾರೆಯರಾದ ದೇವದಾಸ್ ಕಾಪಿಕಾಡ್, ವಿಜಯ ಕುಮಾರ್ ಕೊಡಿಯಾಲ್ ಬೈಲ್, ಅರವಿಂದ ಬೋಳಾರ್, ಅರ್ಜುನ್ ಕಾಪಿಕಾಡ್, ವಿನಿತ್, ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ, ತುಳು ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲಸಾರ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಪ್ರಾಯೋಜಕರಾದ ಎಸ್ ಕೆ ಎಸ್  ಬಿಲ್ಡರ್ ಸುಜೀತ್ ಶೆಟ್ಟಿ, ಐಎಂಅವತಾರ್ ಸಂಸ್ಥೆಯ ಮಾಲೀಕರಾದ ಮುಂಬೈ ಉದ್ಯಮಿ ದೀಪಕ್ ಶೆಣೈ ವಾಶಿ, ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್, ಹ್ಯಾಂಗ್ಯೋ ಐಸ್ ಕ್ರೀಂ ಪ್ರದೀಪ್ ಪೈ, ಕಾಮತ್ ಕೇಟರರ್ಸ್ ಸುಧಾಕರ್ ಕಾಮತ್ ಹಾಗೂ ಗಣ್ಯರು, ಉದ್ಯಮಿಗಳು, ವಿವಿಧ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top