ಎಲ್.ಐ.ಸಿ. ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಕೆ.ಆರ್. ತಂಡದಿಂದ ನಿವೃತ್ತ ಶಿಕ್ಷಕರಿಗೆ ಅಭಿವಂದನೆ

Upayuktha
0

ಸೈನಿಕರು ದೇಶ ರಕ್ಷಿಸಿದರೆ ಶಿಕ್ಷಕರು ದೇಶ ಕಟ್ಟುವವರು : ಟಿ.ನಾರಾಯಣ ಭಟ್


ಪುತ್ತೂರು: ಪುತ್ತೂರಿನ ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಕೆ.ಆರ್. ಹಾಗೂ ಅವರ ಪ್ರತಿನಿಧಿಗಳ ಬಳಗದಿಂದ ಪುತ್ತೂರು ಹಾಗೂ ಕಡಬ ತಾಲೂಕಿನ ನಿವೃತ್ತ ಶಿಕ್ಷಕರಿಗೆ ‘ಗುರುವಂದನಾ ಕಾರ್ಯಕ್ರಮ’ ನಗರದ ಸೈನಿಕ ಭವನದಲ್ಲಿ ಗುರುವಾರ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ. ನಾರಾಯಣ ಭಟ್ ರಾಮಕುಂಜ ಮಾತನಾಡಿ ಸೈನಿಕರು ದೇಶ ರಕ್ಷಿಸುವವರಾದರೆ ಶಿಕ್ಷಕರು ರಾಷ್ಟ್ರ ಕಟ್ಟುವವರು ಎಂದರಲ್ಲದೆ ಜೀವ ವಿಮಾ ನಿಗಮ ಬದುಕಿಗೆ ಭದ್ರತೆ ಒದಗಿಸುವ ಕಾರ್ಯ ಮಾಡುತ್ತದೆ. ನಾವು ತೊಡಗಿಸಿದ ಹಣ ನಮಗೂ ಸುಭದ್ರತೆ ನೀಡುವುದರೊಂದಿಗೆ ದೇಶದ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.


ಜೀವವಿಮಾ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಕೆ.ಆರ್. ಅವರು ಮಾತನಾಡಿ ಉತ್ತಮ ಸಮಾಜಕ್ಕೆ ಕಾರಣರಾದ ನಿವೃತ್ತ ಶಿಕ್ಷಕರನ್ನು ಗೌರವಿಸುವುದು ಪುಣ್ಯಕಾರ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರದ ಭಾರತೀಯ ಜೀವ ವಿಮಾ ನಿಗಮದ ಮುಖ್ಯ ಪ್ರಬಂಧಕ ಬಾಲಕೃಷ್ಣ ಡಿ. ಮಾತನಾಡಿ ದೇಶದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿರುವ ಶಿಕ್ಷಕರ ಸಮೂಹ ಎಲ್.ಐ.ಸಿ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಎಲ್.ಐ.ಸಿ ಎಂಬುದು ಸಮಾಜಕ್ಕೆ ಆರ್ಥಿಕ ಭದ್ರತೆ ನೀಡುವ ಸಂಸ್ಥೆ. ಸದಾ ಉತ್ತಮ ಸೇವೆಯೊಂದಿಗೆ ಜೀವವಿಮಾ ಪ್ರತಿನಿಧಿಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಶುಭಕೋರಿದರು. ಈ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗಮದ ಉಪಪ್ರಬಂಧಕ ಗುರುರಾಜ್ ಎಂ.ಯು. ಭಾರತೀಯ ಜೀವ ವಿಮಾ ನಿಗಮದಲ್ಲಿ ಹೂಡಿಕೆ ಹಾಗೂ ಉಳಿತಾಯ ಯೋಜನೆಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 35 ಮಂದಿ ವಿಶ್ರಾಂತ ಶಿಕ್ಷಕರಿಗೆ "ಗುರುವಂದನೆ” ಸಲ್ಲಿಸಲಾಯಿತು. ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕರಲ್ಲಿ ಒಬ್ಬರಾದ ಉಪ್ಪಿನಂಗಡಿ ಮಾದರಿ ಶಾಲೆಯ ಪದವೀಧರೇತರ ಮುಖ್ಯ ಶಿಕ್ಷಕಿ ದೇವಕಿ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈಯವರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.


ಪುತ್ತೂರು ಹಾಗೂ ಕಡಬ ತಾಲೂಕಿನ ನಿವೃತ್ತ ಶಿಕ್ಷಕರುಗಳಾದ ಕಮಲಾ ಕೆಎಸ್, ಶಾಂತಕುಮಾರಿ ಎನ್, ದೇವಕಿ ಯಂ, ಬಾಲಚಂದ್ರ, ಲಕ್ಷ್ಮಣ ನಾಯ್ಕ , ಲೂಸಿ ಕೆ, ತೀರ್ಥೇಶ್ ಪಿ, ಮನೋರಮ ಕೆ, ಶೀನಪ್ಪ ನಾಯ್ಕ, ಪುಷ್ಪಾವತಿ ಯಂ, ಸುಲೋಚನಾ, ಮೊಂತಿ ಮೇರಿ ರಾಡ್ರಿಗಸ್, ಹುಕ್ರಪ್ಪ ನಾಯ್ಕ, ಗೀತಾಮಣಿ ಎಸ್, ಉದಯಕುಮಾರ್, ಶ್ರೀಧರ ಬೋಳಿಲ್ಲಾಯ, ಐಡಾ ಡಿಸೋಜ, ಕಸ್ತೂರಿ ಬಿ, ಶಶಿಕಲಾ ಕೆ., ನಿರ್ಮಲಾ ಬಿ.ಕೆ, ರಿಚರ್ಡ್ ವೇಗಸ್ˌ ದಯಾನಂದ ರೈˌ ಉದಯಕುಮಾರ್ ಎಸ್., ಶಂಕರನಾರಾಯಣ, ದೇವಕಿˌ ವಿಶ್ವೇಶ್ವರ ಭಟ್, ಲಕ್ಷ್ಮಿ, ವಸಂತಿ, ಸುಲೋಚನಾ ಕೆ, ಜಾನಕಿ ಎಂ, ಪುಷ್ಪಕುಮಾರಿ, ತಾಬ್ರ, ಲಿಲ್ಲಿ ಡಿ'ಸೋಜˌ ರುಕ್ಮಿಣಿ ಡಿ., ಜೂಲಿಯಾನ ಸಿ ಗೋವಿಯಸ್ ಹಾಗೂ ಮೇರಿ ಕೆ ಎಂ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.


ಜೀವವಿಮಾ ಪ್ರತಿನಿಧಿ ನಾರಾಯಣ ಗೌಡ ಸ್ವಾಗತಿಸಿದರು. ಪ್ರತಿನಿಧಿ ಆನಂದ ಗೌಡˌ ರಾಮಕುಂಜ ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಪ್ರಸ್ತುತ ಜೀವವಿಮಾ ಪ್ರತಿನಿಧಿ ಯಶೋದಾ ಕೆ.ಎಸ್. ಮತ್ತು ಪ್ರತಿನಿಧಿ ಶುಕಲತಾರವರು ಕಾರ್ಯಕ್ರಮ ನಿರ್ವಹಿಸಿದರು. ಪ್ರತಿನಿಧಿಗಳಾದ ವಿದ್ಯಾˌ ಪ್ರೇಮಾˌ ರಾಘವೇಂದ್ರˌ ಸುಬ್ರಹ್ಮಣ್ಯ ಭಟ್, ವಿಷ್ಣುಭಟ್, ವಸಂತಗೌಡ, ಪ್ರಶಾಂತ ಭಂಡಾರಿ, ಪ್ರಸಾದ್ ಬಿ, ಸಂಧ್ಯಾ ಬಿ, ಅನುಷಾ ಹಾಗೂ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಕೆ.ಆರ್. ಬಳಗದ ಪ್ರತಿನಿಧಿ ಮಿತ್ರರು ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top