ಮನೆ ಮತ್ತು ಮನವನ್ನು ಬೆಳಗುವ ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ. ಸಂತೋಷ - ಸಡಗರವನ್ನು ತನ್ನೊಂದಿಗೆ ಹೊತ್ತು ತಂದಿದೆ. ಮನೆಯ ತುಂಬಾ ಹಣತೆ ಹಾಗೂ ಗೂಡುದೀಪಗಳ ನಡುವೆ ಪೈಪೋಟಿಯೇ ಏರ್ಪಡುತ್ತದೆ. ಹೀಗಾಗಿ ಈ ಬಾರಿಯ ದೀಪಾವಳಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು 'ಮಾಂಡೋವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು ಆನ್ಲೈನ್ ಮೂಲಕ 'ದೀಪಾವಳಿ ಸ್ಪರ್ಧೆ 2022' ಆಯೋಜಿಸಿದೆ. ಅದುವೇ "ಫೋಟೋ ವಿತ್ ಗೂಡುದೀಪ ಸ್ಪರ್ಧೆ." ಮಾರುತಿ ಸುಜುಕಿಯ ಸಾರಥ್ಯದಲ್ಲಿ ಈ ಸ್ಪರ್ಧೆಯು ನಡೆಯಲಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ನವೆಂಬರ್ 2, 2022 ಕೊನೆಯ ದಿನಾಂಕವಾಗಿದೆ. ರಾತ್ರಿ 8 ಗಂಟೆಯ ಒಳಗಾಗಿ ಫೋಟೋಗಳನ್ನು ಕಳುಹಿಸಬೇಕು. ತಾವು ಕಳಿಸಿದ ಫೋಟೋಗೆ ಲೈಕ್‌ಗಳನ್ನು ಪಡೆಯಲುನವೆಂಬರ್ 7, 2022 ಕೊನೆಯ ದಿನಾಂಕವಾಗಿರುತ್ತದೆ. ಅದೇ ದಿನಾಂಕ ರಾತ್ರಿ 8 ಗಂಟೆಗೆ ಸರಿಯಾಗಿ, ಲೈಕ್ ಗಳನ್ನು ಪಡೆಯುವ ಅವಕಾಶ ಕೊನೆಗೊಳ್ಳುತ್ತದೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ 'ಮಾಂಡೋವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು ಅತ್ಯಾಕರ್ಷಕ ಬಹುಮಾನವನ್ನು ನೀಡುತ್ತಿದೆ. 5,000 ರೂ. ಹಾಗೂ 2,500 ರೂ. ಮೌಲ್ಯದ ಗಿಫ್ಟ್ ವಾಚರ್ ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸುವಂತೆ ಕೋರಲಾಗಿದೆ. ಈ ಮೂಲಕ ದೀಪಾವಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳಿ.
ಸ್ಪರ್ಧೆಯ ನಿಯಮಗಳು ಇಂತಿವೆ :
> ಒಂದು ಕುಟುಂಬದಿಂದ ಒಬ್ಬ ಸ್ಪರ್ಧಾರ್ಥಿಯ ಪ್ರವೇಶಕ್ಕೆ ಮಾತ್ರ ಅನುಮತಿಸಲಾಗಿದೆ.
> ಮನೆಯ ಗೂಡು ದೀಪದೊಂದಿಗೆ ನಿಮ್ಮ ಫೋಟೋವನ್ನು ಕ್ಲಿಕ್ ಮಾಡಿ ಮತ್ತು ಅದನ್ನು ವಾಟ್ಸಾಪ್ ಸಂಖ್ಯೆ +917338587333 ಗೆ ಕಳುಹಿಸಿ.
> ಭಾಗವಹಿಸುವವರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಮ್ಮ ಫೇಸ್ಬುಕ್ ಪುಟವನ್ನು (ಮಾಂಡೋವಿ ಮೋಟಾರ್ಸ್, ಮಂಗಳೂರು) ಲೈಕ್ ಮಾಡಬೇಕು.
> ಸ್ಪರ್ಧೆಯನ್ನು ಗೆಲ್ಲಲು ಗರಿಷ್ಠ ಲೈಕ್ ಗಳನ್ನು ಪಡೆಯಬೇಕು.
> ಮಾಂಡೋವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್, ಮಂಗಳೂರು ಅಗತ್ಯವಿದ್ದರೆ ಯಾವುದೇ ಪರಿಸ್ಥಿತಿಯಲ್ಲಿ, ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸುವ ಎಲ್ಲಾ ಹಕ್ಕುಗಳನ್ನು ಹೊಂದಿದೆ.
> ನಕಲಿ ಲೈಕ್ ಗಳನ್ನು ಅನರ್ಹಗೊಳಿಸಲಾಗುತ್ತದೆ.
> ಸ್ಪರ್ಧೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ವಾಟ್ಸಾಪ್ ಮೂಲಕ ಮಾತ್ರ ಸ್ಪಷ್ಟಪಡಿಸಬೇಕು, ಕರೆಗಳನ್ನು ಸ್ವೀಕರಿಸಲಾಗುವುದಿಲ್ಲ.
ಮನೆಯನ್ನು ಸುಂದರವಾದ ಗೂಡುದೀಪಗಳಿಂದ ಅಲಂಕರಿಸಿ. ಮತ್ತು ಅದರೊಂದಿಗೆ ಫೋಟೋ ಕ್ಲಿಕ್ಕಿಸಿ ಸಂಸ್ಥೆಗೆ ಕಳುಹಿಸಿ. ಆಕರ್ಷಕ ಬಹುಮಾನವನ್ನು ನಿಮ್ಮದಾಗಿಸಿಕೊಳ್ಳಿ. ದೀಪಾವಳಿ ಹಬ್ಬವು ಎಲ್ಲರ ಬದುಕಲ್ಲೂ ಸಂತೋಷ ನೆಮ್ಮದಿಯ ಬೆಳಕನ್ನು ತರಲಿ ಎಂದು ಸಂಸ್ಥೆಯು ಆಶಿಸುತ್ತಾ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುತ್ತಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ