ಅಂಡಾಲದ ಸುಗಿಪು ದೃಶ್ಯ ಶ್ರಾವ್ಯ ವೀಡಿಯೊ ಬಿಡುಗಡೆ

Upayuktha
0


ಮಂಗಳೂರು: ದೀಪಾವಳಿ ಹಬ್ಬದ ಆಚರಣೆಯ ಶುಭ ಸಂದರ್ಭದಲ್ಲಿ ಮಂಗಳೂರಿನ ಮರಕಡದಲ್ಲಿರುವ ಅಂಡಾಲದ ಧರ್ಮದೈವಗಳ ಚಾವಡಿಯಲ್ಲಿ ಅಲ್ಲಿನ ಪುರಾತನತೆ ಮತ್ತು ಧರ್ಮದೈವಗಳ ಮಹಿಮೆಯನ್ನು ಸಾರುವ ಅಂಡಾಲದ ಸುಗಿಪು ಎಂಬ ತುಳು ದೃಶ್ಯ ಶ್ರಾವ್ಯ ವೀಡಿಯೋ ಬಿಡುಗಡೆಗೊಂಡಿತು.


ವೀಡಿಯೊ ಬಿಡುಗಡೆಗೊಳಿಸಿ ಮಾತಾಡಿದ ಕವಿ - ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು, ಪ್ರತಿಯೊಂದು ಪುಣ್ಯಸ್ಥಳಕ್ಕೂ ತನ್ನದೇ ಆದ ಐತಿಹ್ಯ ಮತ್ತು ಪರಂಪರೆ ಇರುತ್ತದೆ. ಅದನ್ನು ಅನಾವರಣ ಮಾಡಿದಾಗ ಮುಂದಿನ ತಲೆಮಾರಿನವರಿಗೆ ಅದರಿಂದ ಅಭಿಮಾನ ಮೂಡುವುದಲ್ಲದೆ ಅಸ್ಮಿತೆ ದೊರೆಯುತ್ತದೆ. ಇದರಿಂದ ಬದುಕು ಆರೋಗ್ಯಪೂರ್ಣವೂ ಸಂಪನ್ನವೂ ಆಗುತ್ತದೆ ಎಂದು ಹೇಳಿದರು.


ಬರಹರೂಪದ ಸಾಹಿತ್ಯಕ್ಕಿಂತ ಡಿಜಿಟಲ್ ರೂಪದಲ್ಲಿರುವ ಇಂತಹ ದೃಶ್ಯ - ಶ್ರಾವ್ಯ ಸಾಹಿತ್ಯವು ವಾಟ್ಸ್ ಆಪ್ ಮತ್ತು ಯು ಟ್ಯೂಬ್ ಮೂಲಕ ಜಗತ್ತಿನಾದ್ಯಂತ ಸಂವಹನಗೊಳ್ಳುವ ಅವಕಾಶ ಪಡೆಯುತ್ತದೆ. ಅಂಡಾಲದಂತಹ ಒಂದು ಪುರಾತನ ಸ್ಥಳದ ಇತಿಹಾಸವು ಜಗತ್ತಿನಾದ್ಯಂತ ಪಸರಿಸಲು ಇದರಿಂದ  ಸಾಧ್ಯವಾಗುತ್ತದೆ ಎಂದು ಡಾ. ಪೆರ್ಲ ಅವರು ಹೇಳಿದರು.  


ವೀಡಿಯೋಗೆ ಸಾಹಿತ್ಯ ಒದಗಿಸಿದ ಅಂಡಾಲ ಗಂಗಾಧರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾಡಿದರು. ಸ್ವರ ಸಂಯೋಜನೆ ಮಾಡಿ ವೀಡಿಯೊವನ್ನು ರೂಪಿಸಿದ ಜಗದೀಶ ಶಿವಪುರ ಪ್ರಾರ್ಥನೆ ಹಾಡಿದರು. ಶಿರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ನಯನಾ ಪಕ್ಕಳ ಕಾರ್ಯಕ್ರಮ ನಿರೂಪಿಒಸಿದರು. ಈ ಸಂದರ್ಭದಲ್ಲಿ ಸಂಗೀತ ಸಂಯೋಜಕ ಜಗದೀಶ ಶಿವಪುರ ಅವರನ್ನು ಗೌರವಿಸಲಾಯಿತು. ರಂಜಿತ್ ಶೆಟ್ಟಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
To Top