ಉಡುಪಿ: ತೆಂಕನಿಡಿಯೂರಿನಲ್ಲಿ ಶ್ರೀ ವಿಶ್ವಕರ್ಮ ಪೂಜೆ

Upayuktha
0

ಉಡುಪಿ: ಶ್ರೀ ಕಾಳಿಕಾಂಬಾ ಭಜನಾ ಸಂಘ (ರಿ.) ತೆಂಕನಿಡಿಯೂರು, ಶ್ರೀ ದೇವಿ ಮಹಿಳಾ ಮಂಡಳಿ ಮತ್ತು ಬಾಲ ಸಂಸ್ಕಾರ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಪೂಜೆಯು ಪುರೋಹಿತ್ ಉದ್ಯಾವರ ವಿಶ್ವನಾಥ ಆಚಾರ್ಯ ನೇತೃತ್ವಲ್ಲಿ ನೆರವೇರಿತು. ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಜನಾ ಸಂಘದ ಅಧ್ಯಕ್ಷರಾದ ಶ್ರೀ ಟಿ. ಕೃಷ್ಣ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.


ಪುರೋಹಿತ ಉದ್ಯಾವರ ವಿಶ್ವನಾಥ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಕುಂಜಿಬೆಟ್ಟಿನ ಶ್ರೀ ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ರಾಜೀವಿ ವಿಠಲ ಆಚಾರ್ಯ ಇವರು ಮಾತನಾಡಿ “ಮಾನವನಿಗೆ ಸಂಸ್ಕಾರ ಅತೀ ಅಗತ್ಯವಾಗಿ ಬೇಕಾಗಿದೆ. ಎಳವೆಯಲ್ಲಿಯೇ ರಾಮಾಯಣ, ಮಹಾಭಾರತ ಹಾಗೂ ಇತರ ಮೌಲ್ಯಯುತ ನೀತಿಗಳನ್ನು ಮತ್ತು ಸಂಸ್ಕಾರವನ್ನು ಪರಿಣಾಮಕಾರಿಯಾಗಿ ನೀಡಿದರೆ ಮಕ್ಕಳ ಮುಂದಿನ ಜೀವನ ಯಶಸ್ವಿಯಾಗಿರುತ್ತದೆ” ಎಂದು ಹೇಳಿದರು.


ಈ ಸಂದರ್ಭದಲ್ಲಿ ವಿದ್ಯಾನಿಧಿ ಶಾಶ್ವತ ದತ್ತಿನಿಧಿಯಿಂದ ಬಂದ ವಾರ್ಷಿಕ ಬಡ್ಡಿ ಮೊತ್ತ ಸುಮಾರು ರೂ.38,000 ವನ್ನು ತೆಂಕನಿಡಿಯೂರು ಗ್ರಾಮದ ಅರ್ಹ ವಿಶ್ವಕರ್ಮ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಭಜನಾ ಸಂಘದ ಸದಸ್ಯ ಶ್ರೀ ಮಾಧವ ಕೆ ಆಚಾರ್ಯ ವಿದ್ಯಾರ್ಥಿವೇತನ ಕಾರ್ಯಕ್ರಮ ನಿರ್ವಹಿಸಿದರು.


ರಥಶಿಲ್ಪಿ ಶ್ರೀ ಬಾಬು ಆಚಾರ್ಯ ಮಾಣಿಬೆಟ್ಟು ಶಿರ್ವ ಹಾಗೂ ಭಜನಾ ಸಂಘದ ಹಿರಿಯ ಸದಸ್ಯ ಶ್ರೀ ಪದ್ಮನಾಭ ಆಚಾರ್ಯ ತೆಂಕನಿಡಿಯೂರು ಇವರನ್ನು ಸನ್ಮಾನಿಸಲಾಯಿತು. ಶ್ರೀ ಉಮೇಶ್ ಜಿ. ಆಚಾರ್ಯ, ಶ್ರೀಮತಿ ಶಾಲಿನಿ ರವೀಂದ್ರ ಆಚಾರ್ಯ ಸನ್ಮಾನ ಪತ್ರ ವಾಚಿಸಿದರು. ವೇದಿಕೆಯಲ್ಲಿ ಶ್ರೀ ದೇವಿ ಮಹಿಳಾ ಮಂಡಳಿಯ ಗೌರವ ಅಧ್ಯಕ್ಷೆ ಶ್ರೀಮತಿ ಅಪ್ಪಿ ಶಿವಯ್ಯ ಆಚಾರ್ಯ, ಅಧ್ಯಕ್ಷೆ ಶ್ರೀಮತಿ ಸುಶೀಲಾ ವಾದಿರಾಜ ಆಚಾರ್ಯ ಉಪಸ್ಥಿತರಿದ್ದರು.


ಶ್ರೀ ಉಮೇಶ್ ಜೆ ಆಚಾರ್ಯ ಸ್ವಾಗತಿಸಿ, ಶ್ರೀ ದೇವಿ ಮಹಿಳಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಉಷಾ ಶ್ರೀಧರ ಆಚಾರ್ಯ ಧನ್ಯವಾದ ಅರ್ಪಿಸಿದರು. ಶ್ರೀಮತಿ ಸುಷ್ಮಾ ರಾಜೇಶ ಆಚಾರ್ಯ ಕಂಗಣಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top