ಉಡುಪಿ: ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ವಿಶೇಷ ಶಿಬಿರವು ಉಪ್ಪೂರು ಪ್ರೌಢಶಾಲೆಯಲ್ಲಿ ಸೆ.26ರಂದು ವಿಧ್ಯುಕ್ತವಾಗಿ ದೀಪ ಬೆಳಗುವುದರ ಮೂಲಕ ಉದ್ಘಾಟನೆಗೊಂಡಿತು. ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರಶಾಂತ್ ಸುವರ್ಣ ದೀಪ ಬೆಳಗಿಸಿ ಉದ್ಘಾಟಿದರು.
ಅವರು ಮಾತನಾಡಿ, ಶಿಬಿರ ಸದುದ್ದೇಶ ಹೊಂದಿದ್ದು, ಯಶಸ್ವಿಯಾಗಲೆಂದು ಹಾರೈಸಿದರು. ಮುಖ್ಯ ಅತಿಥಿಗಳಾದ ಶ್ರೀ ವಿಜಯ್ ಮಾಯಾಡಿಯವರು ಮಾತನಾಡಿ, ಸೇವೆಯು ಮನುಷ್ಯನ ವ್ಯಕ್ತಿತ್ವವನ್ನು ಉನ್ನತೀಕರಿಸುತ್ತದೆಂದು ಅಭಿಪ್ರಾಯಪಟ್ಟರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಂಧ್ಯಾ ಸರಸ್ವತಿಯವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಪ್ರಾಂಶುಪಾಲರಾದ ಶ್ರೀ ರುದ್ರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಮತ್ತು ಪ್ರಸ್ತಾವನೆಯನ್ನು ಶಿಬಿರದ ಕಾರ್ಯಕ್ರಮಾಧಿಕಾರಿ ಶ್ರೀಮತಿ ಗಿರಿಜಾ ಹೆಗಡೆ ನಿರ್ವಹಿಸಿದರು.
ಸಹ ಕಾರ್ಯಕ್ರಮಾಧಿಕಾರಿ ಶ್ರೀಮತಿ ಸುಧಾ ಹೆಗಡೆ, ಬಾಲಕಿಯರ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿ. ಎನ್ ಎಸ್ ಎಸ್ ನ ಶ್ರೀಮತಿ ಮಂಜುಳಾ ಮತ್ತು ಶ್ರೀ ರಾಮಕೃಷ್ಣ ಅವರು ಉಪಸ್ಥಿತರಿದ್ದರು. ಡಾ.ಸುಮಾ ಕಾರ್ಯಕ್ರಮ ರೂಪಿಸಿದರೆ ದಯಾನಂದ್ ವಂದಿಸಿದರು. ಭಾವನಾ ಮತ್ತು ಬಳಗದವರು ಎನ್.ಎಸ್ ಎಸ್ ಗೀತೆ ಹಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ