ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇಲ್ಲಿನ ಪ್ರಥಮ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳ ಸಮಾಜಕಾರ್ಯ ಗ್ರಾಮೀಣ ಶಿಬಿರವು ಇತ್ತೀಚೆಗೆ ಸಮಾರೋಪಗೊಂಡಿತು.
ರುಕ್ಮಿಣಿ ಶೆಡ್ತಿ ಮೆಮೊರಿಯಲ್ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರೀದೇವಿ ಕೆ. ಇವರು ಸಮಾರೋಪ ಭಾಷಣದಲ್ಲಿ “ಸಮಾಜಕಾರ್ಯ ಶಿಬಿರವು ಇತರ ಶಿಬಿರಗಳಿಗಿಂತ ಭಿನ್ನವಾಗಿದ್ದು ಸಮಾಜಕಾರ್ಯ ತಂತ್ರಗಳನ್ನು ಅಭ್ಯಾಸ ಮಾಡುವ ಮತ್ತು ಸಮುದಾಯವನ್ನು ಅರ್ಥಮಾಡಿಕೊಳ್ಳುವ ತಂತ್ರಗಳು, ಜಾಗೃತಿ ಮೂಡಿಸುವ ವಿಷಯಗಳೇ ಪ್ರಾಮುಖ್ಯವಾಗಿರುತ್ತವೆ” ಎಂದರು.
ಎಲ್ಲಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಂಚಾಲಕರಾದ ಡಾ.ದುಗ್ಗಪ್ಪ ಕಜೆಕಾರ್ ಅಧ್ಯಕ್ಷತೆ ವಹಿಸಿದ್ದರು.
ಶಿಬಿರಾರ್ಥಿ ಕು. ಅನುಷ ಎ.ಎಸ್ ಶಿಬಿರದ ವರದಿ ವಾಚಿಸಿದರು. ಕು. ರಕ್ಷಿತಾ ಸ್ವಾಗತಿಸಿದರು. ಕು. ದೀಪಾ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾಧಿಕಾರಿ ಶ್ರೀಮತಿ ಸುಷ್ಮಾ ಟಿ. ಧನ್ಯವಾದ ಅರ್ಪಿಸಿದರು.
ವೇದಿಕೆಯಲ್ಲಿ ಕಲ್ಯಾಣಪುರ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಟಿ. ಸೀತಾ, ಚೈತನ್ಯ ಚಾರಿಟೇಬಲ್ ಟ್ರಸ್ಟ್‌ನ ಸ್ಪಂದನ ವಿಶೇಷ ಶಾಲೆಯ ಅಧ್ಯಕ್ಷರಾದ ಉಮೇಶ್ ನಾಕೂರು, ಕೋಶಾಧಿಕಾರಿ ವಿವೇಕ ಕಾಮತ್, ಗೊರೆಟ್ಟಿ ಆಸ್ಪತ್ರೆಯ ಸಮಾಜಕಾರ್ಯಕರ್ತರಾದ ರಾಕೇಶ್ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಸಮಾಜಕಾರ್ಯ ಉಪನ್ಯಾಸಕರಾದ ಡಾ. ಪ್ರಮೀಳ ಜೆ. ವಾಜ್, ರಾಜೇಂದ್ರ ಎಂ, ಉಷಾ, ರವಿ ಎಸ್. ಸಹನ ಎಸ್, ಕು.ಸುಮತಿ ಬಿಲ್ಲವ, ಶ್ರೀಕಲಾ ಕುಮಾರಿ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ