ಅಂಚೆ ಇಲಾಖೆಯ 35ನೇ ಅಖಿಲ ಭಾರತ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

Upayuktha
0

3-0 ಸೆಟ್‌ಗಳಿಂದ ಪಂಜಾಬ್‌ ಗೆ ಸೋಲುಣಿಸಿದ ಆತಿಥೇಯ ಕರ್ನಾಟಕ


ಬೆಂಗಳೂರು: 35 ನೇ ಅಖಿಲ ಭಾರತ ಪೋಸ್ಟಲ್ ವಾಲಿಬಾಲ್ ಪಂದ್ಯಾವಳಿಯನ್ನು ಇಂದು (ಸೆ.27) ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ಯಾರಾ ಅಥ್ಲೀಟ್ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕೆ. ವೈ ವೆಂಕಟೇಶ್ ಅವರು ಡಿಜಿಟಲ್ ಮೋಡ್‌ನಲ್ಲಿ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ವಹಿಸಿದ್ದರು. ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಶುಭ ಹಾರೈಸಿದರು.  ಪೋಸ್ಟಲ್ ಅಕೌಂಟ್ಸ್ ಮತ್ತು ಫೈನಾನ್ಸ್ ಡಯಾಸ್ ಜನರಲ್‌ ಮ್ಯಾನೇಜರ್‌ ಶ್ರೀಮತಿ ಸಪ್ನಾ ಪ್ರಮೋದ್ ಉಪಸ್ಥಿತರಿದ್ದರು.


ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ 16 ತಂಡಗಳ ಪಥ ಸಂಚಲನದೊಂದಿಗೆ ಕಾರ್ಯಕ್ರಮವು ಔಪಚಾರಿಕವಾಗಿ ಪ್ರಾರಂಭವಾಯಿತು, ಕೇಂದ್ರೀಯ ವಿದ್ಯಾಲಯ, ಎಂ.ಇ.ಜಿ. ಸೆಂಟರ್ ಶಾಲೆಯ ವಿಧ್ಯಾರ್ಥಿಗಳು ಪಥಸಂಚಲನಕ್ಕೆ ಬ್ಯಾಂಡ್ ಸೆಟ್ ನಿರ್ವಹಿಸದರು. ಕಾರ್ಯಕ್ರಮವು ನಾಡ ಗೀತೆಯೊಂದಿಗೆ ಪ್ರಾರಂಭವಾಯಿತು. ಅಂಚೆ ಪ್ರಧಾನ ಕಚೇರಿಯ ಶ್ರೀಮತಿ ಕೈಯಾ ಅರೋರಾ ಸ್ವಾಗತಿಸಿದರು. ಬೆಂಗಳೂರು ಪ್ರಧಾನ ಕಚೇರಿಯ ಪ್ರಾದೇಶಿಕ ಪೋಸ್ಟ್ ಮಾಸ್ಟರ್ ಜನರಲ್  ಎಲ್.ಕೆ. ಡ್ಯಾಶ್ ವಂದಿಸಿದರು.


ಶ್ರೀಮತಿ ಸುಷ್ಮಾ ಮತ್ತು ಶ್ರೀ ಹೇಮಂತ್ ಕುಮಾರ್ ಬಿ.ಆರ್. ಕಾರ್ಯಕ್ರಮ ನಿರ್ವಹಿಸಿದರು. ಆತಿಥೇಯ ತಂಡದ ನಾಯಕ ಕಾರ್ತಿಕ್ ಎ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇತೃತ್ವ ವಹಿಸಿದ್ದರು. 16 ಅಂಚೆ ವೃತ್ತಗಳ ತಂಡಗಳ ನಡುವೆ 4 ದಿನಗಳ ಕಾಲ ಈ ಪಂದ್ಯಾವಳಿ ನಡೆಯಲಿದೆ. ಆತಿಥೇಯ ಕರ್ನಾಟಕ ಮತ್ತು ಪಂಜಾಬ್ ನಡುವೆ ಉದ್ಘಾಟನಾ ಪಂದ್ಯದಲ್ಲಿ ಕರ್ನಾಟಕ ತಂಡ 3-0 ನೇರ ಸೆಟ್‌ಗಳಿಂದ ಜಯಗಳಿಸಿತು.

ಅಪರಾಹ್ನದ ವೇಳೆಗೆ ಲೀಗ್  ಹಂತದ 6 ಪಂದ್ಯಗಳು ಮುಗಿದಿದ್ದು ಇದರ ಫಲಿತಾಂಶಗಳು ಈ ಕೆಳಗಿನಂತಿವೆ:

 

ತಂಡ

ತಂಡ

ವಿಜೇತ ತಂಡ

ಸ್ಕೋರ್

ಪಂದ್ಯದ ಅವಧಿ

ಕರ್ನಾಟಕ    

ಪಂಜಾಬ್     

ಕರ್ನಾಟಕ 3-0 ಅಂತರ

25-9 25-9 25-6

45 ನಿಮಿಷಗಳು

ಹಿಮಾಚಲ ಪ್ರದೇಶ       

ಮಹಾರಾಷ್ಟ್ರ          

ಹಿಮಾಚಲ ಪ್ರದೇಶ 3-0 ಅಂತರ

25-17 25-16 25-19             

60 ನಿಮಿಷಗಳು

ಪಶಿಮ ಬಂಗಾಳ

ಗುಜರಾತ್

ಪಶ್ಚಿಮ ಬಂಗಾಳ 3-1 ಅಂತರ

25-16, 23-25, 25-19, 25-10                      

89 ನಿಮಿಷಗಳು

ರಾಜಸ್ಥಾನ

ಆಂಧ್ರ ಪ್ರದೇಶ

ರಾಜಸ್ಥಾನ

3-1 ಅಂತರ

21-25, 25-20, 25-20, 25-19

95 ನಿಮಿಷಗಳು

ಓಡಿಶ

ತೆಲಂಗಾಣ

ಓಡಿಶ

3-0 ಅಂತರ

25-18, 25-20, 25-21               

65 ನಿಮಿಷಗಳು

ಕೇರಳ

ದೆಹಲಿ

ಕೇರಳ

3-0 ಅಂತರ

25-13, 25-10, 25-14

50 ನಿಮಿಷಗಳು

         

ನಾಳೆ ಸೆ. 28 ರಂದು ಲೀಗ್ ಮಟ್ಟದ ಪಂದ್ಯಗಳು ಮುಂದುವರಿಯಲಿದ್ದು ಒಟ್ಟು 12 ಪಂದ್ಯಗಳು ನಡೆಯಲಿವೆ. ಪಂದ್ಯಗಳ ಸಮಯ ಹಾಗೂ ತಂಡಗಳ ವಿವರಗಳನ್ನು ಹಾಗೂ ನೇರ ಪ್ರಸಾರ ಹಾಗೂ ಸ್ಕೋರ್ ಇತ್ಯಾದಿ ವಿವರಗಳನ್ನು www.karnatakapost.gov.in:4431/aipvt ಲಿಂಕ್ ನಲ್ಲಿ ನೋಡಬಹುದು. ಪಂದ್ಯಾವಳಿಯ ಎಲ್ಲ ಪಂದ್ಯಗಳ ವಿಡಿಯೋ ಹಾಗೂ ನೇರ ಪ್ರಸಾರಕ್ಕಾಗಿ ಈ ಯೂ ಟ್ಯೂಬ್ ಲಿಂಕ್ ಗೆ ಭೇಟಿ ನೀಡಿ : http://www.youtube.com/c/CPMGKarnatakaCircle 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top