ಸಮಾಜದಲ್ಲಿ ಒಳ್ಳೆಯ ಮನಸ್ಸುಗಳು ಹುಟ್ಟಿಕೊಳ್ಳಲು ಕಮ್ಮಟಗಳು ಬೇಕು: ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ

Upayuktha
0

ಎಡನೀರು: ಇಂದು ಸಮಾಜದಲ್ಲಿ ವಿಘಟನೆಯ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ಸಮಾಜ ಸಂಘಟಿತವಾಗಿ ಎದ್ದು ನಿಲ್ಲಲು ಸಾಧ್ಯವಿಲ್ಲ. ನಮ್ಮ ಸಮಾಜ ಗಟ್ಟಿಗೊಳ್ಳಬೇಕಾದರೆ ಕಮ್ಮಟಗಳ ಮೂಲಕ ಮನಸ್ಸು ಬೆಸೆಯುವ ಕೆಲಸ ಆಗಬೇಕಾಗಿದೆ ಎಂದು ಎಡನೀರು ಮಠದ ಸ್ವಾಮೀಜಿ ಶ್ರೀ ಸಚ್ಚಿದಾನಂದ ಭಾರತಿ ಹೇಳಿದರು.


ಕಳೆದ ಮೂರು ದಿನಗಳಿಂದ ಇಲ್ಲಿ ನಡೆಯುತ್ತಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡ ರಾಷ್ಟ್ರೀಯ ಕಾವ್ಯ ಕಮ್ಮಟದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು.


ಇಂದು ಕಟ್ಟುವ ಸಾಹಿತ್ಯ ಹೆಚ್ಚು ಹೆಚ್ಚು ರಚನೆ ಆಗಬೇಕು. ಒಡೆಯುವ ಸಾಹಿತ್ಯವಲ್ಲ. ಸಮಾಜ ಕಟ್ಟುವ ಸಾಹಿತ್ಯ ನಿರ್ಮಾಣಕ್ಕಾಗಿ ನಾವಿಂದು ಶ್ರಮಿಸುತ್ತಿದ್ದೇವೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ. ವಿ. ವಸಂತಕುಮಾರ್ ನುಡಿದರು.


ಕಮ್ಮಟದ ನಿರ್ದೇಶಕರಾದ ಡಾ. ವಸಂತಕುಮಾರ ಪೆರ್ಲ ಅವರು ಮಾತಾಡುತ್ತ, ಕಾವ್ಯವು ಇಂದಿನ ಸಮಾಜವನ್ನು ಅವಲೋಕಿಸುತ್ತ ಸುಂದರ ನಾಳೆಗಳನ್ನು ಕಟ್ಟುವ ಉದ್ದೇಶ ಹೊಂದಿರುತ್ತದೆ. ಅದಕ್ಕಾಗಿ ಯುವ ಕವಿಗಳನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಈ ಕಮ್ಮಟದ ಮೂಲಕ ಆ ಉದ್ದೇಶ ಈಡೇರಿದೆ ಎಂದರು.


ಮುಖ್ಯ ಅತಿಥಿಯಾಗಿದ್ದ ಕವಿ ಬಿ. ಆರ್. ಲಕ್ಷ್ಮಣ ರಾವ್ ಅವರು, ಪ್ರೀತಿ ಹರಡುವುದು ಕಾವ್ಯದ ಕೆಲಸ. ಪ್ರೀತಿಯಿಂದ ನಾವು ಸುಂದರ ಸಮಾಜ ಕಟ್ಟಬೇಕಾಗಿದೆ ಎಂದರು. ಅದಕ್ಕೂ ಮುನ್ನ ಅವರು ಕಾವಿ ಕಾವ್ಯ ಸಂವಾದದಲ್ಲಿ ಭಾಗವಹಿಸಿದರು.


ಅಕಾಡೆಮಿಯ ಸದಸ್ಯ ಸಂಚಾಲಕ ಕೇಶವ ಬಂಗೇರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪಿ. ಎನ್. ಮೂಡಿತ್ತಾಯ, ಸಂಪನ್ಮೂಲ ವ್ಯಕ್ತಿಗಳಾದ ತಲಕಾಡು ನಾಗರಾಜ, ಧನಂಜಯ ಕುಂಬಳೆ ಮತ್ತು ಬಿ. ಆರ್. ಸೂರಜ್ ವೇದಿಕೆಯಲ್ಲಿದ್ದರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top