ನೀಟ್ 2022: ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

Upayuktha
0


ಪುತ್ತೂರು: ವೈದ್ಯಕೀಯ ವೃತ್ತಿ ಕೋರ್ಸ್‍ಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ, ನೀಟ್-2022 ಪರೀಕ್ಷೆಯಲ್ಲಿ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಫಲಿತಾಂಶ ಪಡೆದಿದ್ದಾರೆ.


ರಾಮಕುಂಜದ ಚಿತ್ತರಂಜನ್ ಮತ್ತು ಸಂಧ್ಯಾ ದಂಪತಿ ಪುತ್ರ ಕೌಶಿಕ್ ರಾವ್ 573 ಅಂಕಗಳೊಂದಿಗೆ 4896ನೇ ರ‍್ಯಾಂಕ್‌ ಗಳಿಸಿ ಉತ್ತಮ ಸಾಧನೆ ಮಾಡಿದ್ದಾನೆ. ಸುಮಾರು 18 ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ ಈ ಸಾಧನೆ ಗಮನಾರ್ಹವಾಗಿದೆ.


ಉಳಿದಂತೆ ಮಡಿಕೇರಿಯ ಕೃಷ್ಣಮೂರ್ತಿ ಎಮ್ ಎಸ್ ಮತ್ತು ಪರಿಮಳ ಎಂ ಎಸ್ ದಂಪತಿಯ ಪುತ್ರ ಶ್ರೀವತ್ಸ ಎಂ ಕೆ 565 ಅಂಕ (15495 ರ‍್ಯಾಂಕ್‌), ಕಡಬದ ಲೋಕೇಶ್ ಎ ಹಾಗೂ ಉಷಾ ಬಿ. ದಂಪತಿ ಪುತ್ರ ಅನುಷ್ ಎ ಎಲ್ 557 ಅಂಕ (17272 ರ‍್ಯಾಂಕ್‌), ಬೆಂಗಳೂರಿನ ನಿಂಗೇಗೌಡ ಹಾಗೂ ಸುನಿತಾ ಪಿ.ಕೆ ದಂಪತಿ ಪುತ್ರ ಶ್ರೇಯಸ್ ಗೌಡ ಬಿ ಎನ್ (501 ಅಂಕ), ಬೆಂಗಳೂರಿನ ಮಹಾಂತೇಶ್ ಎ ಅಂಗಡಿ ಹಾಗೂ ರಾಜೇಶ್ವರಿ ಎಂ ಅಂಗಡಿ ದಂಪತಿಯ ಪುತ್ರಿ ಭಾವನಾ ಎಂ ಅಂಗಡಿ (486 ಅಂಕ), ಪುತ್ತೂರಿನ ಬಪ್ಪಳಿಗೆಯಲ್ಲಿನ ಬಿ.ಸಂಕಪ್ಪ ರೈ ಹಾಗೂ ಸುಪ್ರಿಯಾ ಎಸ್ ರೈ ದಂಪತಿ ಪುತ್ರಿ ಸ್ಮೃತಿ ರೈ (478 ಅಂಕ), ಸಕಲೇಶಪುರದ ಎಸ್ ಪಿ ನಾಗೇಶ್ ಹಾಗೂ ಜ್ಯೋತಿ ನಾಗೇಶ್ ದಂಪತಿ ಪುತ್ರಿ ನೇಹಾ ಎಸ್ ಎನ್ (458 ಅಂಕ), ದರ್ಬೆಯ ನಿರಂಜನ ಆಚಾರ್ಯ ಕೆ ಮತ್ತು ಹೇಮಲತಾ ಎನ್ ಆಚಾರ್ಯ ದಂಪತಿಯ ಪುತ್ರಿ ರಿತಿಕಾ ಎನ್ ಆಚಾರ್ಯ (457 ಅಂಕ), ಕಾಸರಗೋಡು ಕಾಟುಕುಕ್ಕೆಯ ಬಿ ಎಸ್ ಪ್ರಸನ್ನ ಹಾಗೂ ಬಿ ಎಸ್ ವಾಣಿ ದಂಪತಿಯ ಪುತ್ರಿ ಬಿ ಎಸ್ ಅವನಿ (422 ಅಂಕ), ಕಾಸರಗೋಡಿನ ಸದಾಶಿವ ಭಟ್ ಎಸ್ ವಿ ಮತ್ತು ಪೂರ್ಣಿಮ ದಂಪತಿ ಪುತ್ರಿ ಶ್ರೀವಿದ್ಯಾ (416 ಅಂಕ), ಬೆಳ್ಳಾರೆ ಬಾಳಿಲದ ಎನ್ ಈಶ್ವರ ಭಟ್ ಹಾಗೂ ಅನೀತಾ ಐ ಭಟ್ ದಂಪತಿಯ ಪುತ್ರ ಅನೀಶ್ ರಾಮ್ ಎನ್ (411 ಅಂಕ) ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.


ವಿದ್ಯಾರ್ಥಿಗಳ ಈ ಸಾಧನೆಗೆ ಸಂಚಾಲಕರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ಮತ್ತು ಉಪನ್ಯಾಸಕೇತರ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top