ಮಂಗಳೂರು: ಶ್ರೀನಿವಾಸ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ ಅಂಡ್ ಟೂರಿಸಂ ಮತ್ತು ಡಿಪಾರ್ಟ್ ಮೆಂಟ್ ಆಫ್ ಇಂಟೀರಿಯರ್ ಡಿಸೈನ್ ವತಿಯಿಂದ 2022ರ ಸೆಪ್ಟೆಂಬರ್ 24ರಂದು ಮಂಗಳೂರಿನ ಪಾಂಡೇಶ್ವರದ ಶ್ರೀನಿವಾಸ್ ಯೂನಿವರ್ಸಿಟಿ ಸಿಟಿ ಕ್ಯಾಂಪಸ್ ನಲ್ಲಿ ಫ್ರೆಶರ್ಸ್ ಡೇ (ಪ್ರಾರಂಭ್ 2022) ಆಚರಿಸಲಾಯಿತು.
ಡಾ. ಸಿಎ. ಎ. ರಾಘವೇಂದ್ರ ರಾವ್, ಮಂಗಳೂರು ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವ ಕುಲಪತಿ ಮತ್ತು ಅಧ್ಯಕ್ಷ ಎ. ಶಾಮರಾವ್ ಫೌಂಡೇಶನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಪ್ರವಾಸೋದ್ಯಮ ಕ್ಷೇತ್ರ ಮತ್ತು ಒಳಾಂಗಣ ವಿನ್ಯಾಸ ಮತ್ತು ಅಲಂಕಾರ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ನಿರ್ಮಿಸುವಲ್ಲಿ ಕಠಿಣ ಪರಿಶ್ರಮ ಮತ್ತು ಸ್ವಯಂ-ತೊಡಗಿಸಿಕೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ, ಟ್ರಸ್ಟಿ-ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್ ಹಾಗೂ ಪ್ರೊ. ಇರ್. ಶ್ರೀಮತಿ ಎ. ಮಿತ್ರ ಎಸ್. ರಾವ್ , ಇವರು ರ್ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಯೂನಿವರ್ಸಿಟಿ ಇನ್ ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ ಮತ್ತು ಟೂರಿಸಂ ಹಾಗೂ ಡಿಪಾರ್ಟ್ ಮೆಂಟ್ ಆಫ್ ಇಂಟೀರಿಯರ್ ಡಿಸೈನ್ ನ ನೂತನ ವಿದ್ಯಾರ್ಥಿ ಪರಿಷತ್ ಸದಸ್ಯರಿಗೆ ಬ್ಯಾಡ್ಜ್ ಗಳನ್ನು ಹಸ್ತಾಂತರಿಸಲಾಯಿತು.
ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್ ಅವರು ಹೊಸಬರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಆತಿಥ್ಯ ಉದ್ಯಮವು ಹೊಂದಿರುವ ಅವಕಾಶಗಳನ್ನು ಎತ್ತಿ ತೋರಿಸಿದರು ಮತ್ತು ಅವರ ವೃತ್ತಿಜೀವನದ ಹಾದಿಯನ್ನು ಆರಿಸಿಕೊಳ್ಳುವಾಗ ಉತ್ಸಾಹಿತರಾಗಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಪ್ರೊ. ಇರ್. ಶ್ರೀಮತಿ ಎ. ಮಿತ್ರಾ ಎಸ್. ರಾವ್ ಅವರು ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿ ಪರಿಷತ್ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು ಮತ್ತು ತಮ್ಮ ಭಾಷಣದಲ್ಲಿ, ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಒಳಾಂಗಣ ವಿನ್ಯಾಸ ಕೊರ್ಸ್ ಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು ಮತ್ತು ಆತಿಥ್ಯ ಕ್ಷೇತ್ರ ಮತ್ತು ಒಳಾಂಗಣ ವಿನ್ಯಾಸದ ಪ್ರಸ್ತುತ ಜಾಗತಿಕ ಸನ್ನಿವೇಶದ ಒಂದು ಇಣುಕುನೋಟವನ್ನು ನೀಡಿದರು.
ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ.ಎಸ್.ಐತಾಳ್, ಕುಲಸಚಿವ (ಅಭಿವೃದ್ಧಿ) ಡಾ.ಅಜಯ್ ಕುಮಾರ್ ಅವರು ಈ ಸಂದರ್ಭದಲ್ಲಿ ಗೌರವಾನ್ವಿತ ಅತಿಥಿಗಳಾಗಿದ್ದರು.
ಪ್ರೊ.ಸ್ವಾಮಿನಾಥನ್ ಎಸ್, ಡೀನ್, ಪ್ರೊ. ಶ್ರೀಜಿತ್ ಓ.ವಿ., ಹೋಟೆಲ್ ಮ್ಯಾನೇಜ್ ಮೆಂಟ್ ಅಂಡ್ ಟೂರಿಸಂ ಕೋರ್ಸ್ ಕೋ ಆರ್ಡಿನೇಟರ್, ಇನ್ ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ ಅಂಡ್ ಟೂರಿಸಂ, ಪ್ರೊ.ಯೋಗೀತಾ ಪೈ, ಇಂಟೀರಿಯರ್ ಡಿಸೈನ್ ವಿಭಾಗದ ಕೋರ್ಸ್ ಕೋ ಆರ್ಡಿನೇಟರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಇತರ ಸೋದರ ಸಂಸ್ಥೆಗಳ ಡೀನ್ ಗಳು ಮತ್ತು ಮಂಗಳೂರಿನ ಶ್ರೀನಿವಾಸ ವರ್ದಾ ಕೇಸರಿಯ ಪ್ರಧಾನ ವ್ಯವಸ್ಥಾಪಕ ಶ್ರೀ ಉಪೇಂದ್ರ ಸಿಂಗ್ ರಾವತ್ ಆವರು ಕೂಡ ಉಪಸ್ಥಿತರಿದ್ದರು.
ನಾಲ್ಕನೇ ವರ್ಷದ ಬಿ.ಎಚ್.ಎಂ.ಸಿ.ಟಿ.ಯ ವಿದ್ಯಾರ್ಥಿ ಶ್ರೀಮತಿ ಆರ್ಯ ಸಾವನ್ ಶಿರೋಡ್ಕರ್ ಅವರು ಸಭಿಕರನ್ನು ಸ್ವಾಗತಿಸಿದರು ಮತ್ತು ಬಿ.ಎಸ್ಸಿ.ಐಡಿ ಮೂರನೇ ವರ್ಷದ ವಿದ್ಯಾರ್ಥಿ ಶ್ರೀಮತಿ ಶ್ರಾವ್ಯ ಶೆಟ್ಟಿಯವರು ವಂದನಾರ್ಪಣೆ ಮಾಡಿದರು. ಔಪಚಾರಿಕ ಕಾರ್ಯಕ್ರಮವನ್ನು ಬಿ.ಎಸ್ಸಿ.ಎಚ್.ಎಮ್ ಮೂರನೇ ವರ್ಷದ ವಿದ್ಯಾರ್ಥಿ ಶ್ರೀ ಕ್ಲಾರನ್ ಫ್ರಾಂಕ್ ಅಬ್ರೋ ಅವರು ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ, ಕೇಕ್ ಕತ್ತರಿಸುವ ಸಮಾರಂಭವು ಕಾರ್ಯಕ್ರಮದ ಮುಖ್ಯಾಂಶಗಳಾಗಿದ್ದವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ