ಕುಂಬಳೆ : ಸಿರಿಗನ್ನಡ ವೇದಿಕೆ ಕೇರಳ ಗಡಿನಾಡ ಘಟಕ- ಕಾಸರಗೋಡು ವತಿಯಿಂದ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2022 ಅಂಗವಾಗಿ ದಸರಾ ಕವಿಗೋಷ್ಠಿ ನಾಳೆ (ಅ.2 ಭಾನುವಾರ) ಕುಂಬಳೆ ಸಮೀಪದ ನಾರಾಯಣಮಂಗಲದ ಕುಳಮರ್ವ 'ಶ್ರೀನಿಧಿ' ಭಟ್ಸ್ ಕಂಪೌಂಡ್‌ನಲ್ಲಿ ನಡೆಯಲಿದೆ.
ಅಪರಾಹ್ನ 2:30ರಿಂದ ನಡೆಯುವ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ, ಲೇಖಕ ಶ್ರೀ ಮಲಾರ್ ಜಯರಾಮ ರೈ ಅವರು ಉದ್ಘಾಟಿಸಲಿದ್ದಾರೆ. ನಿವೃತ್ತ ಕನ್ನಡ ಅಧ್ಯಾಪಕ ಶ್ರೀ ಗುಣಾಜೆ ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಧುರೈ ಕಾಮರಾಜ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಡಾ. ಹರಿಕೃಷ್ಣ ಭರಣ್ಯ ಅವರು ಭಾಗವಹಿಸಲಿದ್ದಾರೆ. ಶ್ರೀ ವಾಮನರಾವ್ ಬೇಕಲ್ ಶುಭಾಶಂಸನೆ ನೆರವೇರಿಸಲಿದ್ದಾರೆ.
ಕು | ಸಂವೃತಾ ಭಟ್ ಪೇರ್ಯ (ಪ್ರಾರ್ಥನೆ), ಶ್ರೀಮತಿ ಲಲಿತಾಲಕ್ಷ್ಮಿ ಕುಳಮರ್ವ (ದೀಪ ಪ್ರಜ್ವಲನೆ), ಶ್ರೀ ವಿ.ಬಿ. ಕುಳಮರ್ವ (ಸ್ವಾಗತ ಮತ್ತು ಪ್ರಸ್ತಾವನೆ), ಪ್ರೊ. ಗಣಪತಿ ಭಟ್ ಕುಳಮರ್ವ (ನಿರೂಪಣೆ), ಶ್ರೀ ಶ್ಯಾಮಪ್ರಸಾದ ಕುಳಮರ್ವ (ವಂದನಾರ್ಪಣೆ) ನಿರ್ವಹಿಸಲಿದ್ದಾರೆ. ದಸರಾ ಕವಿಗೋಷ್ಠಿಯಲ್ಲಿ 37 ಮಂದಿ ಕವಿಗಳು ಭಾಗವಹಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ