ಬೆಂಗಳೂರು: ಎಸ್.ವಿ.ಎನ್.ಕೆ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ವತಿಯಿಂದ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕ ಡಾ.ಎಸ್.ಜಿ.ಜೈನಾಪೂರ ಅವರ ‘ಅಭಿವ್ಯಕ್ತಿ ಕಲಾ ಸಂಹಿತೆ’ ಕವನ ಸಂಕಲನವನ್ನು ನಗರದ ಬಸವನಗುಡಿಯ ಡಿ.ವಿ.ಜಿ ರಸ್ತೆಯ ಶ್ರೀ ಸಾಯಿ ಜ್ಯೂವೆಲ್ಸ್ ಪ್ಯಾಲೇಸ್‍ನ ಮೇಲಿನ ಎಸ್.ವಿ.ಎನ್.ಕೆ ಪದವಿ ಕಾಲೇಜು ಸಭಾಂಗಣದಲ್ಲಿ ಎಸ್.ವಿ.ಎನ್.ಕೆ ಪದವಿ ಕಾಲೇಜು ಅಧ್ಯಕ್ಷ ಟಿ.ವಿ.ಸೆಂಥಿಲ್ ರವರು ಲೋಕಾರ್ಪಣೆಗೊಳಿಸಿದರು.
ವಿಜಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಲೇಖಕ ಡಾ.ಆರ್. ವಾದಿರಾಜು ಮಾತನಾಡುತ್ತ ಕಾವ್ಯಕಲಾ ಪ್ರಕಾಶನ ಪ್ರಕಟಿಸಿರುವ ‘ಅಭಿವ್ಯಕ್ತಿ ಕಲಾ ಸಂಹಿತೆ’ 21 ಕವನಗಳ ಸಂಕಲನ; ಎರಡನೇ ಶತಮಾನದ ಚೀನಿ ಕಾವ್ಯಗಳ ‘ದಿ ಆರ್ಟ್ ಆಫ್ ರೈಸಿಂಗ್’ಅನ್ನು ಹಿರಿಯ ಸಾಹಿತಿ, ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕ ಡಾ. ಎಸ್.ಜಿ. ಜೈನಾಪೂರ ಕನ್ನಡಾನುವಾದಗೊಳಿಸಿರುವುದು ಚೀನಾ ಮತ್ತು ಕನ್ನಡ ಸಂಬಂಧಕ್ಕೆ ಸೇತುವೆಯಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡುತ್ತ ‘ಕಾವ್ಯ, ಸಂಸ್ಕೃತಿ ಮತ್ತು ಭಾಷೆಯ ಸೃಜನಶೀಲತೆಯ ಒಡನಾಟ, ಪರಸ್ಪರರ ಪ್ರಭಾವ ಕುರಿತು ಪ್ರೌಢ ಪ್ರಬಂಧ ಬರೆದಿರುವ ಅವರು ನಾಲ್ಕು ದಶಕಗಳಿಗಿಂತ ಪ್ರಾಂಶುಪಾಲರಾಗಿ, ಬೆಂಗಳೂರು ವಿವಿಯ ಸೆನೆಟ್, ಶೈಕ್ಷಣಿಕ ಪರಿಷತ್ತಿನ ಮಾಜಿ ಸದಸ್ಯರಾಗಿ ಸಕ್ರಿಯ, ದೀರ್ಘ ಸೇವೆ ಸಲ್ಲಿಸಿದ್ದಾರೆ. ಬೋಧನೆ, ಶೈಕ್ಷಣಿಕ ಆಡಳಿತ ಅವರ ವೃತ್ತಿಯಾದರೆ ಸೃಜನಶೀಲತೆ ಅವರ ಒಲವಿನ ಪ್ರವೃತ್ತಿ- ಪತ್ರಿಕೆಗಳಿಗೆ ಅಂಕಣಕಾರರಾಗಿ, ಬಾನುಲಿ ರೂಪಕಗಳನ್ನು ರಚಿಸಿ ಜನಮನ್ನಣೆ ಗಳಿಸಿದ್ದಾರೆ ಎಂದು ತಿಳಿಸಿದರು. ಪ್ರಾಂಶುಪಾಲ ಡಾ.ಸುಜಯ್ ಕುಮಾರ್, ನಿರ್ದೇಶಕ ಶ್ರೀ ಸಾಗರ್ ಯು.ಎಸ್. ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ