ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ‘ಆಝಾದಿ ಕಾ ಅಮೃತ್ ಮಹೋತ್ಸವ’ದ ಪ್ರಯುಕ್ತ ಅಂತರ್ ಕಾಲೇಜು ಮಟ್ಟದ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯು ಆಗಸ್ಟ್ 4 ರಂದು ಸಂಜೆ 6 ಗಂಟೆಗೆ ನಡೆಯಿತು.
ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಿಂದ ಒಟ್ಟು 253 ವಿದ್ಯಾರ್ಥಿಗಳು ಭಾಗವಹಿಸಿದ್ದು, ಪದವಿ ಪೂರ್ವ ವಿಭಾಗದಲ್ಲಿ ಪಾಂಡ್ಯ ರಾಜ್ ಬಲ್ಲಾಳ್ ಕಾಲೇಜಿನ ಅವನಿ ಜೆ ಪ್ರಥಮ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಖಾದೀಜತುಲ್ ಜಕ್ರಿಯ ದ್ವಿತೀಯ ಸ್ಥಾನ ಗಳಿಸಿದರು. ಪದವಿ ವಿಭಾಗದಲ್ಲಿ ಸಂತ ಅಲೋಷಿಯಸ್ ಕಾಲೇಜಿನ ಜೋಸ್ಟನ್ ಕಾಲಿಸ್ಟನ್ ಡಿಸೋಜಾ ಪ್ರಥಮ ಹಾಗೂ ಮಿಸ್ಬಾ ಮಹಿಳಾ ಕಾಲೇಜಿನ ಸಫಿಯ್ಯತ್ ಸಭಾ ದ್ವಿತೀಯ ಸ್ಥಾನ ಪಡೆದುಕೊಂಡರು.
ಕಾಲೇಜಿನ ಪ್ರಾಂಶುಪಾಲೆ ಡಾ.ಸುಭಾಷಿಣಿ ಶ್ರೀವತ್ಸ, ನೋಡಲ್ ಅಧಿಕಾರಿ ಡಾ. ರತಿ, ಮಧುಶ್ರೀ ಹಾಗೂ ಉಪನ್ಯಾಸಕ ರಾಘವೇಂದ್ರ ಸ್ಪರ್ಧೆ ನಡೆಸಿಕೊಟ್ಟರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ