ಕೆನರಾ ಕಾಲೇಜಿನಲ್ಲಿ 'ಸ್ವತಂತ್ರ ವ್ಯಕ್ತಿತ್ವ ರೂಪಣೆ' ಕಾರ್ಯಾಗಾರ

Upayuktha
0

ಮಂಗಳೂರು: "ಸದೃಢ ಸಮಾಜವನ್ನು ಕಟ್ಟಲು ಬೇಕಾದ ಯುವಪೀಳಿಗೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಅವರನ್ನು ಒಗ್ಗೂಡಿಸಬೇಕು" ಎಂದು ಮಂಗಳೂರು ವಿ.ವಿ. ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ. ರವೀಂದ್ರಾಚಾರಿ ನುಡಿದರು.


ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮಂಗಳೂರು ವಿವಿ ಹಾಗೂ ಕೆನರಾ ಕಾಲೇಜು ಸಹಯೋಗದಲ್ಲಿ ಇಲ್ಲಿನ ಸಭಾಂಗಣದಲ್ಲಿ ನಡೆಸಿದ 'ಸ್ವತಂತ್ರ ವ್ಯಕ್ತಿತ್ವ ರೂಪಣೆ 'ಎಂಬ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು "ವ್ಯಕ್ತಿತ್ವವಿಕಸನ ಪರಿಕಲ್ಪನೆಯ ಮೂಲಕ ಸಮಾಜದ ಯುವಕರನ್ನು ಸಜ್ಜುಗೊಳಿಸಲು ಪ್ರೇರೇಪಿಸಬೇಕು. ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯದ ಪರದೆಯ ಹಿಂದಿನ ನಿಜವಾದ ಹೋರಾಟಗಳು ಅದಕ್ಕೆ ಸಾಕ್ಷಿಯಾದವರಿಗೆ ತಿಳಿದಿದೆ" ಎಂದು ಹೇಳಿದರು.


ಕಾಲೇಜು ಸಂಚಾಲಕ ಸಿ ಎ ಎಂ ಜಗನ್ನಾಥ ಕಾಮತ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು  "ಪಡೆದುಕೊಂಡ ಜ್ಞಾನವನ್ನು ಸಮಾಜದಲ್ಲಿ ಪಸರಿಸಬೇಕು. ದೇಶದ ಅಭಿವೃದ್ಧಿಗಾಗಿ ಉತ್ತಮ ಸಮಾಜವನ್ನು ನಿರ್ಮಿಸುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ" ಎಂದರು.


ಅಭಿಯಾನಂ ನಿರ್ದೇಶಕ ಡಾ. ಶಿಕಾರಿಪುರ ಕೃಷ್ಣಮೂರ್ತಿ, ಶ್ರೀ ನಂದಗೋಪಾಲ, ಶ್ರೀಮತಿ ಅನಿಲ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರ ನಡೆಸಿಕೊಟ್ಟರು. ಸಮಾರೋಪ ಸಮಾರಂಭದಲ್ಲಿ ಸಿಎ ಎಂ. ವಾಮನ್ ಕಾಮತ್  ಅಧ್ಯಕ್ಷತೆ ವಹಿಸಿದ್ದು "ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಹೆತ್ತವರ, ಸ್ನೇಹಿತರ ಹಾಗೂ ಸಮಾಜದ ಪಾತ್ರ ಬಹಳ ಮುಖ್ಯವಾಗಿದೆ "ಎಂದು ನುಡಿದರು.


ಕೆನರಾ ಕಾಲೇಜು ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ ಸ್ವಾಗತಿಸಿ, ಕಾರ್ಯಾಗಾರ ಸಂಯೋಜಕಿ ಜಯಭಾರತಿ ಕೆ.ಪಿ ವಂದಿಸಿದರು. ಸಂಯೋಜಕಿ ಶ್ರೀಮತಿ ಅನಸೂಯಾ ಭಾಗವತ್ ಉಪಸ್ಥಿತರಿದ್ದರು. ಡಾ. ಕಲ್ಪನಾ ಪ್ರಭು ಹಾಗೂ ಶೈಲಜಾ ಪುದುಕೋಳಿ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top