ಹಸಿರಿಲ್ಲದೆ ಉಸಿರಿಲ್ಲ: ಡಾ|| ಚೂಂತಾರು

Upayuktha
0

ಇನ್‌ಫೆಂಟ್ ಜೀಸಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ



ಮಂಗಳೂರು: ಇನ್‌ಫೆಂಟ್ ಜೀಸಸ್ ಹಿರಿಯ ಪ್ರಾಥಮಿಕ ಶಾಲೆ, ಮೇರಿಹಿಲ್ ಮಂಗಳೂರು ಇಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ತಂಡದ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ಗುರುವಾರ (ಆ.4) ಆಚರಿಸಲಾಯಿತು.


ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರು ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯು ಒಂದು ಗಿಡ ನೆಟ್ಟರೆ ಪರಿಸರ ಮಾಲಿನ್ಯ ಕಡಿಮೆ ಮಾಡಬಹುದು. ವನಮಹೋತ್ಸವವನ್ನು ಸಾಂಸ್ಕøತಿಕ ಹಬ್ಬವಾಗಿ ಆಚರಿಸಬೇಕು ಗಿಡ ನೆಟ್ಟು, ಪರಿಸರ ಬೆಳೆಸಿ ಉಳಿಸೋಣ ನಾವೆಲ್ಲ ಒಂದೆಡೆ ಸೇರಿ, ಒಂದಷ್ಟು ಗಿಡ ನೆಡಲು ಕೈ ಜೋಡಿಸೋಣ ಎಂದು ನುಡಿದರು. ಹಸಿರಿಲ್ಲದೆ ಉಸಿರಿಲ್ಲ ಎಂಬ ಹಿರಿಯರ ಮಾತಿನಂತೆ ನಾವೆಲ್ಲ ಪರಿಸರ ಉಳಿಸಲು ಕಟಿಬದ್ಧರಾಗೋಣ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಇನ್ಫ್ಫೆಂಟ್ ಜೀಜಸ್ ಶಾಲೆಯ ವಿದ್ಯಾರ್ಥಿಗಳಾದ ವಿಕ್ರಮ್ ಮತ್ತು ಋತು ಇವರು ಮಾತನಾಡಿ ಪ್ರಪಂಚದ ಭೂ ಪ್ರದೇಶಗಳಲ್ಲಿ 3ನೇ 1 ಭಾಗವು ಅರಣ್ಯಗಳಿಂದ ಕೂಡಿದೆ, ಅರಣ್ಯಗಳೆಂದರೆ ಗಿಡ ಮರಗಳು ಸಸ್ಯ ಸಂಪನ್ಮೂಲಗಳಲ್ಲದೆ ಆ ಪ್ರದೇಶದಲ್ಲಿರುವ ಕ್ರಿಮಿ ಕೀಟ, ಪ್ರಾಣಿ ಅರಣ್ಯೋತ್ಪತ್ತಿ ಎಲ್ಲವೂ ಎಂದರ್ಥ. ಮನುಷ್ಯನ ಸೌಲಭ್ಯ ಅವಶ್ಯಕತೆಗಳು ಬೆಳೆದ ಹಾಗೆ ಮರಗಳು ಒಂದಾದ ಮೇಲೆ ಒಂದು ಉರುಳಿದವು, ಮರಗಳನ್ನು ಕಡಿದ ಹಾಗೆ ಅರಣ್ಯಗಳು ನಾಶವಾಗುತ್ತಿದೆ ಕಾಡು ಕಣ್ಮರೆಯಾದರೆ ಮಳೆಗಳು ಕಡಿಮೆಯಾಗುತ್ತದೆ  ಭೂಮಿ ಬರಡಾಗುತ್ತದೆ ಎಂದು ನುಡಿದರು.


ಈ ಕಾರ್ಯಕ್ರಮದಲ್ಲಿ ಇನ್ಫ್ಫೆಂಟ್ ಜೀಜಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯಿನಿಯಾದ  ಪ್ರಣೀತ, ಶಿಕ್ಷಕಿಯರಾದ ಸಿಸ್ಟರ್ ಮ್ಯಾಗ್ದಲೀನ್, ಜೋಯ್ಸ್ ಡಿಕೋಸ್ತಾ ಹಾಗೂ ಶಾಲೆಯ ವಿದ್ಯಾರ್ಥಿಗಳು ಮತ್ತು ಗೃಹರಕ್ಷಕದಳ ಕಛೇರಿಯ ಅಧೀಕ್ಷಕರಾದ ಶ್ರೀ ರತ್ನಾಕರ ಎಂ, ಮಂಗಳೂರು ಘಟಕದ ಘಟಕಾಧಿಕಾರಿ ಶ್ರೀ ಮಾರ್ಕ್‍ಶೇರಾ, ಗೃಹರಕ್ಷಕರಾದ ಕೇಶವ ಶೆಟ್ಟಿಗಾರ್, ಸುನೀಲ್, ದಿವಾಕರ್, ಕನಕಪ್ಪ, ವಿನಯ್, ಸಂತೋಷ್, ಮಹೇಶ್ ಪ್ರಸಾದ್, ಭವಾನಿ, ಮರಿಯ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top